ಬಸ್ ಪಲ್ಟಿ ; ಹಲವರಿಗೆ ಗಾಯ

ಬಸ್ ಪಲ್ಟಿ ; ಹಲವರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸು ಪಲ್ಟಿಯಾಗಿ ಹತ್ತಕ್ಕೂ ಅಧಿಕ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ಪರಂಗಿಪೇಟೆ ಸಮೀಪದ ಹತ್ತನೇ ಮೈಲಿಕಲ್ಲು ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಫರಂಗಿಪೇಟೆ ಹತ್ತನೇ ಮೈಲಿ ಕಲ್ಲು ಎಂಬಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಒಡೆದು, ಎಡಭಾಗಕ್ಕೆ ತಿರುಗಿಸಿದ ಪರಿಣಾಮ ರಸ್ತೆ ಬದಿಯಲ್ಲಿರುವ ಮರಕ್ಕೆ ಡಿಕ್ಕಿಯಾಗಿ ಬಸ್ ಮಗುಚಿ ಬಿದ್ದಿದೆ.
ಗಾಯಾಳುಗಳನ್ನು ಕೂಡಲೇ ಎಸ್ಕೆ ಎಸ್ ಎಸ್ಎಫ್ ಅಂಬ್ಯುಲೆನಸ್ ಚಾಲಕ ಇಬ್ರಾನ್, ಕೆಜಿಎನ್ ಅಂಬ್ಯುಲೆನ್ಸ್ ನ ಚಾಲಕ ನಾಸೀರ್, ಕುಮ್ಟೇಲ್ ಬಳಿಯ ಅಂಬುಲೆನ್ಸ್ ಹಾಗೂ ಖಾಸಗಿ ವಾಹನಗಳಲ್ಲಿ ಸ್ಥಳೀಯರಾದ ಶೆಬೀರ್, ಹಂಸ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೋಲೀಸರು ಬೇಟಿ ನೀಡಿದ್ದಾರೆ.

Leave a Reply

You May Have Missed

error: Content is protected !!