ನೆಲ್ಯಾಡಿ:ಕೆ .ಏನ್ .ಎಸ್ .ಎಸ್ ಕರ್ಕಾಟಕ ಮಾಸಾದ್ಯಂತ 31 ದಿನಗಳ ಕಾಲ ಏರ್ಪಡಿಸಲಾಗಿದ್ದ ರಾಮಾಯಣ ಪಾರಾಯಣ ಸಮಾಪ್ತಿ

nair service society

ನೆಲ್ಯಾಡಿ:ಕೆ .ಏನ್ .ಎಸ್ .ಎಸ್ ಕರ್ಕಾಟಕ ಮಾಸಾದ್ಯಂತ 31 ದಿನಗಳ ಕಾಲ ಏರ್ಪಡಿಸಲಾಗಿದ್ದ ರಾಮಾಯಣ ಪಾರಾಯಣ ಸಮಾಪ್ತಿ

nair service society nelyadi

ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ನೆಲ್ಯಾಡಿ ಕರಯೋಗಂ ಮಹಿಳಾ ವಿಭಾಗ “ಐಶ್ವರ್ಯ” ವತಿಯಿಂದ ಏರ್ಪಡಿಸಲಾಗಿದ್ದ ಕರ್ಕಾಟಕ ಮಾಸಾದ್ಯಂತ 31 ದಿನಗಳ ಕಾಲ ಏರ್ಪಡಿಸಲಾಗಿದ್ದ ರಾಮಾಯಣ ಪಾರಾಯಣ ಸಪ್ತಾಹವು ಗೌರವಾಧ್ಯಕ್ಷರಾದ ಚಂದ್ರಶೇಖರನ್ ನಾಯರ್ ರವರ ಮುಂದಾಳತ್ವದಲ್ಲಿ ದಿನಾಂಕ ಆ.16 ರಂದು ಬೆಳಿಗ್ಗೆ 10 ಗಂಟೆಗೆ ನೆಲ್ಯಾಡಿ ಕರಯೋಗಂ ಸಭಾ ಭವನದಲ್ಲಿ ಸಮಾಪ್ತಿಗೊಳಿಸಲಾಗಿದೆ

ಕಾರ್ಯಕ್ರಮದಲ್ಲಿ ಕರಯೋಗಂ ಅಧ್ಯಕ್ಷರಾದ ಶಿವದಾಸನ್ ಪಿಳ್ಳೈ ಮತ್ತು ಸದಸ್ಯರುಗಳು ,ಗೌರವಾಧ್ಯಕ್ಷರು ,ಮಹಿಳಾ ವಿಭಾಗ “ಐಶ್ವರ್ಯ” ಅಧ್ಯಕ್ಷೆ ಶ್ರೀಜಾ ವಿನೋದ್,ಕಾರ್ಯದರ್ಶಿ ಶ್ರೀಜಾ ಸಂದೀಪ್ ,ಜೊತೆ ಕಾರ್ಯದರ್ಶಿ ಶಕುಂತಲಾ ವಿನೋದ್, ಖಜಾಂಜಿ ಸರಸ್ವತಿ ಹಾಗೂ ಮಹಿಳಾ ವಿಭಾಗದ ಇನ್ನಿತರೆ ಸದಸ್ಯರು ಪಾಲ್ಗೊಂಡಿದ್ದಾರೆ .ರಾಮಾಯಣ ಪಾರಾಯಣವನ್ನು ಕರ್ಕಾಟಕ ಮಾಸದಲ್ಲಿ ಆಹಾರ ಪದ್ಧ್ದತಿಯೊಂದಿಗೆ ಆಚರಿಸುವುದರಿಂದ ಒಂದು ವರ್ಷಕ್ಕೆ ಬೇಕಾದ ಚೈತನ್ಯ ವೃದ್ಧಿಯಾಗಿ ಜೀವನದಲ್ಲಿ ಆನಂದವನ್ನು ಪಡೆಯಲು ರಾಮಾಯಣ ಮಾಸಾಚರಣೆ ನಡೆಸಲಾಗುತ್ತದೆ.

Leave a Reply

You May Have Missed

error: Content is protected !!