ನೆಲ್ಯಾಡಿ: ಕೃಷಿ ತೋಟಕ್ಕೆ ಕಾಡಾನೆ ದಾಳಿ; ಅಪಾರ ಪ್ರಮಾಣದ ಕೃಷಿ ಹಾನಿ

ನೆಲ್ಯಾಡಿ: ಕೃಷಿ ತೋಟಕ್ಕೆ ಕಾಡಾನೆ ದಾಳಿ; ಅಪಾರ ಪ್ರಮಾಣದ ಕೃಷಿ ಹಾನಿ

ನೆಲ್ಯಾಡಿ ಸಮೀಪದ ಬಲ್ಯ ರಸ್ತೆಯ ಪಕ್ಕದಲ್ಲಿ ಇರುವ ಕೃಷಿ ತೋಟಕ್ಕೆ ಭಾನುವಾರ ರಾತ್ರಿ ಕಾಡಾನೆಯೊಂದು ಲಗ್ಗೆ ಇಟ್ಟು ಅಪಾರ ಪ್ರಮಾಣದ ಕೃಷಿ ಹಾನಿ ಮಾಡಿದ ಘಟನೆ ನಡೆದಿದೆ.

ಸತೀಶ್.ಕೆ.ಎಸ್ ದುರ್ಗಾಶ್ರೀ ಅವರ ಕೃಷಿ ತೋಟಕ್ಕೆ ದಾಳಿ ನಡೆಸಿದ ಕಾಡಾನೆ ಸುಮಾರು 20 ವರ್ಷ ಹಳೆಯದಾದ ತೆಂಗಿನ ಮರ ಹಾಗೂ ಅಡಿಕೆ ಗಿಡಗಳನ್ನು ನಾಶ ಮಾಡಿದ್ದು ಅಪಾರ ಪ್ರಮಾಣದ ಕೃಷಿ ಹಾನಿಯಾಗಿದೆ.

ಈ ಪ್ರದೇಶದಲ್ಲಿ ಕಾಡಾನೆಗಳ ಸಂಚಾರ ಆಗಾಗ ನಡೆಯುತ್ತಿದ್ದು, ಕಳೆದ 15 ದಿನಗಳ ಹಿಂದೆ ರಸ್ತೆಯಲ್ಲಿ ಸಂಚರಿಸಿ ವಾಹನ ಸವಾರರು ಪರದಾಡಿದ ಘಟನೆ ನಡೆದಿತ್ತು.

ಅರಣ್ಯ ಇಲಾಖೆಯವರು ಆನೆ ಕಂದಕಗಳನ್ನು ನಿರ್ಮಿಸಿದ್ದು ಇದೀಗ ವಿಪರೀತ ಮಳೆಯಿಂದಾಗಿ ಆನೆಕಂದಕಗಳು ನೀರು ನುಗ್ಗಿದ ಪರಿಣಾಮ ಹಾನಿಗೊಂಡಿರುವುದರಿಂದ ಆನೆ ಸಂಚಾರಕ್ಕೆ ಸುಗಮವಾಗಿದೆ. ತಕ್ಷಣ ಆನೆ ಕಂದಗಳನ್ನು ಪುನಃ ನಿರ್ಮಿಸಬೇಕಾಗಿ ಸಾರ್ವಜನಿಕರು. ಕೃಷಿಕರು ವಿನಂತಿಸಿಕೊಂಡಿದ್ದಾರೆ.

Leave a Reply

You May Have Missed

error: Content is protected !!