ಶಿರಾಡಿ: ಕಾಡಾನೆ ದಾಳಿ-150ಕ್ಕೂ ಹೆಚ್ಚು ಅಡಿಕೆ ಗಿಡ ನಾಶ

ಶಿರಾಡಿ: ಕಾಡಾನೆ ದಾಳಿ-150ಕ್ಕೂ ಹೆಚ್ಚು ಅಡಿಕೆ ಗಿಡ ನಾಶ

ನೆಲ್ಯಾಡಿ: ಕಾಡಾನೆ ಕೃಷಿ ತೋಟಕ್ಕೆ ದಾಳಿ ನಡೆಸಿ 150ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ನಾಶಗೊಳಿಸಿರುವ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದಲ್ಲಿ ಆ.20ರಂದು ಮಧ್ಯರಾತ್ರಿ ನಡೆದಿದೆ.

ಶಿರಾಡಿ ಗ್ರಾಮದ ತೆಕ್ಕನಾಟ್ ನಿವಾಸಿ ಟಿ.ಎ.ಥಾಮಸ್ ಎಂಬವರಿಗೆ ಸೇರಿದ ಕೃಷಿ ತೋಟಕ್ಕೆ ಕಾಡಾನೆ ದಾಳಿ ನಡೆಸಿದ್ದು 150ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ನಾಶಗೊಳಿಸಿದೆ. ಈ ಭಾಗದಲ್ಲಿ ಕಾಡಾನೆಗಳು ಪದೇ ಪದೇ ಕೃಷಿ ತೋಟಕ್ಕೆ ದಾಳಿ ನಡೆಸಿ ಕೃಷಿ ನಾಶಗೊಳಿಸುತ್ತಿರುವುದು ಕೃಷಿಕರು ಆತಂಕಗೊಳ್ಳುವಂತೆ ಮಾಡಿದೆ.

ಆನೆಗಳನ್ನು ಅರಣ್ಯದೊಳಗೆ ಸ್ಥಳಾಂತರಿಸುವ ಮೂಲಕ ಹೆಚ್ಚಿನ ಹಾನಿಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leave a Reply

You May Have Missed

error: Content is protected !!