ಕಾಂಚನದಲ್ಲಿ 27ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ

ಕಾಂಚನದಲ್ಲಿ 27ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ

ಕಾಂಚನದ ವಿಕ್ರಂ ಯುವಕ ಮಂಡಲದ ಆಶ್ರಯದಲ್ಲಿ 27ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಕಾಂಚನ ಸಂಗೀತ ಶಾಲೆಯ ಮೈದಾನದಲ್ಲಿ ನಡೆಯಿತು.

ಕಾಂಚನ ನಡ್ಪ ಶ್ರೀವಿಷ್ಣುಮೂರ್ತಿ ದೇವಸ್ಥಾನದ ಭಜನಾ ಮಂಡಳಿ ವತಿಯಿಂದ ಕೇಶವ ಅಗರ್ತಿಮಾರು, ಭದ್ರಪ್ಪ ಅಗರ್ತಿಮಾರು,, ಸುರೇಶ್ ಬಿದಿರಾಡಿ, ಪ್ರಸಾದ್ ಅಗರ್ತಿಮಾರು,ಉಮೇಶ್ ನೆಕ್ಕರೆ, ಗಂಗಾಧರ್, ರಮೇಶ್, ದುಗ್ಗಪ್ಪ ಅಗರ್ತಿಮಾರು, ರಾಜೇಶ್ ನಡ್ಪ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ಅಡ್ಡ ಕಂಬ ಜಾರುವ ಸ್ಪರ್ಧೆಗೆ ನಿವೃತ್ತ ಪೊಲೀಸ್ ಅಧಿಕಾರಿ ಪದ್ಮಯ್ಯ ಡೆಂಬಲೆ, ವಾಲಿಬಾಲ್ ಪಂದ್ಯಾಟಕ್ಕೆ ಬಾಬು ಗೌಡ ಆಗರ್ತಿಮಾರು ಮತ್ತು ಇತರ ಸ್ಪರ್ಧೆಗೆ ತಿಮ್ಮಪ್ಪ ಬಿದಿರಾಡಿ ಮಡಿಕೆ ಒಡೆಯುವ ಮೂಲಕ ಆಚರಣೆಗೆ ಚಾಲನೆ ನೀಡಿದರು.

ಸಭಾ ಕಾರ್ಯಕ್ರಮದ ಅತಿಥಿಯಾಗಿ ಕಾಂಚನ ಪ್ರೌಢಶಾಲೆ ಮುಖ್ಯಶಿಕ್ಷಕ ರಮೇಶ್ ಮಯ್ಯ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಲಕ್ಷ್ಮಣ ಗೌಡ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ವಿಕ್ರಂ ಯುವಕ ಮಂಡಲ ಅಧ್ಯಕ್ಷ ರಾಮಚಂದ್ರ ಕಾಂಚನ ವಹಿಸಿದ್ದರು. ವೇದಿಕೆಯಲ್ಲಿ ಅನಿಲ್ ಪಿಂಟೊ ಪುಯಿಲ, ಮೋನಪ್ಪ ಗೌಡ ಪುಯಿಲ ಉಪಸ್ಥಿತರಿದ್ದರು.

ವಿಕ್ರಂ ಯುವಕ ಮಂಡಲ ಮತ್ತು ದಿವಂಗತ ಎ.ಬಿ.ಪ್ರಕಾಶ್ ಧರ್ಮಪತ್ನಿ ಜಲಜಾಕ್ಷಿ ಅವರ ಜಂಟಿ ಸಹಭಾಗಿತ್ವದಲ್ಲಿ ಸ್ಥಳೀಯ ಕಾಂಚನ ಶಿಕ್ಷಣ ಸಂಸ್ಥೆಗಳ 4 ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹದಿನಾರು ಸಾವಿರ ರೂಪಾಯಿಗಳ ಆರ್ಥಿಕ ಸಹಾಯದ ಹಸ್ತಾಂತರ ನಡೆಯಿತು. ಕಾರ್ಯದರ್ಶಿ ಗಿರೀಶ್ ಮುದ್ಯ ಸ್ವಾಗತಿಸಿದರು, ಉಪನ್ಯಾಸಕ ಮೋಹನ್ ಚಂದ್ರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು

ಮಕ್ಕಳಿಗೆ, ಪುರುಷರಿಗೆ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.

Leave a Reply

You May Have Missed

error: Content is protected !!