ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ನಿಂದ ವರ್ಗಾವಣೆಗೊಂಡ ಉಪವಲಯಾರಣ್ಯಧಿಕಾರಿಗೆ ಸನ್ಮಾನ

ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ನಿಂದ ವರ್ಗಾವಣೆಗೊಂಡ ಉಪವಲಯಾರಣ್ಯಧಿಕಾರಿಗೆ ಸನ್ಮಾನ

ಕೊಕ್ಕಡ: ಸುಮಾರು 8ವರ್ಷಗಳ ಕಾಲ ಕಳೆಂಜ ಭಾಗದಲ್ಲಿ ದಕ್ಷ ವಲಯ ಅರಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಮಂಗಳೂರಿನ ಅರಣ್ಯ ಸಂಚಾರಿ ದಳಕ್ಕೆ ವರ್ಗಾವಣೆಗೊಂಡ ಪ್ರಶಾಂತ್ ಅವರ ಉತ್ತಮ ಸೇವೆಯನ್ನು ಗುರುತಿಸುವ ಸಲುವಾಗಿ ಕ್ರಿಶ್ಚಿಯನ್ ಬ್ರದರ್ಸ ತಂಡದವರು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಶಾಂತ್ ಅವರು ಉತ್ತಮವಾಗಿ ಸೇವೆಸಲ್ಲಿಸಲು ಈ ಭಾಗದ ಪ್ರತಿಯೊಬ್ಬರೂ ಅವಕಾಶ ಮಾಡಿಕೊಟ್ಟಿದ್ದಾರೆ ಎಲ್ಲರಿಗೂ ನಾನು ಕೃತಜ್ಞನಾಗಿರುವೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷ ಜೋಸೆಫ್.ಕೆ.ಡಿ, ಗೌರವಾಧ್ಯಕ್ಷರಾದ ಪಿ.ಟಿ ಸಬಾಸ್ಟಿನ್, ಉಪಾಧ್ಯಕ್ಷ ಜಿ ತೋಮಸ್, ಕಾರ್ಯದರ್ಶಿ ತೋಮಸ್.ಪಿ.ಡಿ ಕೋಶಾಧಿಕಾರಿ ಮ್ಯಾತ್ಯು ಕೆ.ಕೆ, ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!