ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಮರಿಯ ಜಯಂತಿ ಆಚರಣೆ ಮತ್ತು ಮಹಿಳಾ ಮಹೋತ್ಸವ

ನೆಲ್ಯಾಡಿ :ನೆಲ್ಯಾಡಿಯ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಸೆ.8ರಂದು ಮರಿಯ ಜಯಂತಿಯ ಅಂಗವಾಗಿ ಮಹಿಳಾ ಮಹೋತ್ಸವ ವನ್ನು ಆಚರಿಸಲಾಯಿತು.
ಮಹಿಳಾ ಮಹೋತ್ಸವದ ಅಂಗವಾಗಿ ವಿವಿದ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಸಂತ ಮೋನಿಕಾ ಜೀವನ ಮತ್ತು ಇಂದಿನ ಕುಟುಂಬಗಳು ಈ ವಿಚಾರ ವಾಗಿ ಮಹಿಳೆಯರಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಾತೆಯರು ಸಮವಸ್ತ್ರದಲ್ಲಿ ಬಾಗವಹಿಸಿ ಕಾರ್ಯಕ್ರಮಕ್ಕೆ ಹೆಚ್ಚಿನ ಮೇರುಗನ್ನು ನೀಡಿದರು. ಮಾತೆಯರು ಸಂತರ್ಪಣೆಯ ವ್ಯವಸ್ಥೆಯನ್ನು ಮಾಡಿದ್ದರು.
ಮಹಿಳಾ ವೇದಿಕೆಯ ಸಿಸ್ಟರ್ ಲಿಸ್ ಮಾತ್ಯು, ಜೆಸ್ಸಿ ಕೆ.ಜೆ, ಡಯಾನ ಶಾಜಿ, ಶೈನಿ ಜೇಮ್ಸ್, ಮೇರಿ ಜೋನ್ ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಿದ್ದರು.






















Leave a Reply