ಗೋಳಿತೊಟ್ಟುನಲ್ಲಿ ದುರ್ಗಾಶ್ರೀ ಫೈನಾನ್ಸ್ ನ ನೂತನ ಶಾಖೆ ಶುಭಾರಂಭ

ಗೋಳಿತೊಟ್ಟುನಲ್ಲಿ ದುರ್ಗಾಶ್ರೀ ಫೈನಾನ್ಸ್ ನ ನೂತನ ಶಾಖೆ ಶುಭಾರಂಭ

ಗೋಳಿತೊಟ್ಟುನ ವಿಷ್ಣು ಕೃಪಾ ಕಟ್ಟಡದಲ್ಲಿ ದುರ್ಗಾಶ್ರೀ ಫೈನಾನ್ಸ್ (ರಿ) ನ ನೂತನ ಶಾಖೆಯು ಸೆ.15ರ ರಂದು ಶುಭಾರಂಭಗೊಂಡಿತು.

ಸಂಸ್ಥೆಯ ಮಾಲಕರಾದ ಸತೀಶ್.ಕೆ.ಎಸ್ ಅವರ ಮಾತೃಶ್ರೀ ವಿಜಯಲಕ್ಷ್ಮಿ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ರಿಬ್ಬನ್ ಕತ್ತರಿಸುವ ಮೂಲಕ ಕಚೇರಿಯನ್ನು ನೆಲ್ಯಾಡಿಯ ಜ್ಯೋತಿಷಿ ಶ್ರೀಧರ್ ಗೋರೆ ಹಾಗೂ ನೆಲ್ಯಾಡಿ ಹೋಟೆಲ್ ಸುಬ್ರಮಣ್ಯ ವಿಳಾಸದ ಮಾಲಿಕ ಸುಬ್ಬಣ್ಣ ಅವರು ಉದ್ಘಾಟಿಸಿದರು.

ಶ್ರೀಧರ್ ಗೋರೆ ಅವರು ಮಾತನಾಡಿ ಬೆಳೆಯುತ್ತಿರುವ ಊರಾದ ಗೋಳಿತೊಟ್ಟಿನಲ್ಲಿ ಜನರಿಗೆ ಅತಿ ಅಗತ್ಯದ ಸಂದರ್ಭದಲ್ಲಿ ಆರ್ಥಿಕವಾಗಿ ಸಹಾಯವಾಗುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಆರಂಭಿಸಿದ್ದಾರೆ. ಮಾಲಕರು ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು ತನ್ನ ದುಡಿಮೆಯ ಒಂದಂಶವನ್ನು ಸಮಾಜಕ್ಕೆ ವಿನಿಯೋಗಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು ಹಾಗೂ ಸಂಸ್ಥೆಗೆ ಶುಭವನ್ನು ಹಾರೈಸಿದರು.

ಮಾಲಕರ ಮಾತ್ರಶ್ರೀ ವಿಜಯಲಕ್ಷ್ಮಿ, ನೆಲ್ಯಾಡಿ ಹೋಟೆಲ್ ಸುಬ್ರಮಣ್ಯ ವಿಳಾಸದ ಮಾಲಿಕ ಸುಬ್ಬಣ್ಣ, ಅರ್ಚಕ ಮಾಧವ ಸರಳಾಯ, ಕಟ್ಟಡ ಮಾಲಕ ತುಕ್ರಪ್ಪ ಗೌಡ, ಉದ್ಯಮಿ ರವಿ ಪ್ರಸಾದ್ ಆಚಾರ್ಯ, ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ನಿವೃತ್ತ ಮುಖ್ಯಶಿಕ್ಷಕ ರವೀಂದ್ರ.ಟಿ, ನೆಲ್ಯಾಡಿ ಗ್ರಾಮ ಪಂಚಾಯಿತಿನ ಸದಸ್ಯ ಜಯಾನಂದ ಬಂಟ್ರಿಯಾಲ್ ಶುಭ ಹಾರೈಸಿದರು.

ರಾಮಕುಂಜ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ರಾಧಾಕೃಷ್ಣ.ಕೆ.ಎಸ್, ಡಿಸಿಸಿ ಬ್ಯಾಂಕಿನ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಕಾಮಧೇನು ಬ್ಯಾಂಕಿನ ಅಧ್ಯಕ್ಷೆ ಉಷಾ ಅಂಚನ್, ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಸ್ಥಾಪಕ ಕಾರ್ಯದರ್ಶಿ ಅಬ್ರಹಂ ವರ್ಗಿಸ್ ಮೊದಲಾದವರು ಸಂಸ್ಥೆಗೆ ಭೇಟಿ ನೀಡಿ ಶುಭ ಹಾರೈಸಿದರು.

ಸಂಸ್ಥೆಯ ಮಾಲಕರಾದ ಸತೀಶ್.ಕೆ.ಎಸ್ ಸ್ವಾಗತಿಸಿದರು. ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವಿಶ್ವನಾಥ ಶೆಟ್ಟಿ.ಕೆ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಶಾರದಾ ವಂದಿಸಿದರು.

Leave a Reply

You May Have Missed

error: Content is protected !!