ಅರಸಿನಮಕ್ಕಿ ಪದವಿ ಪೂರ್ವ ಕಾಲೇಜಿನ ಶೌಚಾಲಯ ಕಟ್ಟಡಕ್ಕೆ ಶಿಲಾನ್ಯಾಸ

ಅರಸಿನಮಕ್ಕಿ ಪದವಿ ಪೂರ್ವ ಕಾಲೇಜಿನ ಶೌಚಾಲಯ ಕಟ್ಟಡಕ್ಕೆ ಶಿಲಾನ್ಯಾಸ

ಕೊಕ್ಕಡ:ಅರಸಿನಮಕ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ಶೌಚಾಲಯ ಕಟ್ಟಡಕ್ಕೆ ಶಿಲಾನ್ಯಾಸವನ್ನು ಸ.19ರಂದು ಗ್ರಾ.ಪಂ ಮತ್ತು ಶಾಲಾ ಅಭಿವೃದ್ಧಿ ಸಮಿತಿಯವರು ನೆರವೇರಿಸಿದರು.

ಶಿಕ್ಷಣ ಇಲಾಖೆ ಮತ್ತು ಗ್ರಾ.ಪಂ ಉದ್ಯೋಗ ಖಾತರಿ ಯೋಜನೆಯ ಮೂಲಕ ಶೌಚಾಲಯಕ್ಕೆ 5.20 ಲಕ್ಷ ದೊರೆತಿದ್ದು ಶೀಘ್ರದಲ್ಲಿ ನಿರ್ಮಾಣದ ಕೆಲಸ ಆರಂಭವಾಗಲಿದೆ ಎಂದು ಗ್ರಾ.ಪಂ ಉಪಾಧ್ಯಕ್ಷ ಸುಧೀರ್ ಕುಮಾರ್.ಎಂ.ಎಸ್ ತಿಳಿಸಿದರು.

ಶಿಲಾನ್ಯಾಸ ಸಂಧರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷ ಸುಧೀರ್ ಕುಮಾರ್. ಎಂ.ಎಸ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗಣೇಶ್, ಗ್ರಾ.ಪಂ ಸದಸ್ಯರಾದ ಲಾವಣ್ಯ, ಶಕುಂತಲಾ, ಪುಷ್ಪ, ಜನಾರ್ಧನ, ಕಾಲೇಜು ಪ್ರಾಚಾರ್ಯ ರಾಮಯ್ಯ ಶೆಟ್ಟಿ, ಶಾಲಾ ಮುಖ್ಯಶಿಕ್ಷಕ ಹಾಗೂ ಊರ ಪ್ರಮುಖರಾದ ಶ್ರೀಕಾಂತ್, ಗಣೇಶ್.ಕೆ, ಮುರಳಿಧರ್ ಶೆಟ್ಟಿಗಾರ್ ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!