ರೆಂಜಿಲಾಡಿ ಸ್ಯಾಂತೋಮ್ ವಿದ್ಯಾನಿಕೇತನ್ ಶಾಲೆಯಲ್ಲಿ ಭಾರತ ಸ್ಕೌಟ್ಸ್ -ಗೈಡ್ಸ್ ಉದ್ಘಾಟನಾ ಕಾರ್ಯಕ್ರಮ

ರೆಂಜಿಲಾಡಿ ಸ್ಯಾಂತೋಮ್ ವಿದ್ಯಾನಿಕೇತನ್ ಶಾಲೆಯಲ್ಲಿ ಭಾರತ ಸ್ಕೌಟ್ಸ್ -ಗೈಡ್ಸ್ ಉದ್ಘಾಟನಾ ಕಾರ್ಯಕ್ರಮ

ರೆಂಜಿಲಾಡಿ ಸ್ಯಾಂತೋಮ್ ವಿದ್ಯಾನಿಕೇತನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತ ಸ್ಕೌಟ್ಸ್ ಗೈಡ್ಸ್ ಉದ್ಘಾಟನಾ ಕಾರ್ಯಕ್ರಮ ಸೆ.21ರಂದು ನೆರವೇರಿತು.

ಮುಖ್ಯ ಅತಿಥಿಗಳಾಗಿಭರತ್ ರಾಜ್.ಕೆ ರಾಜ್ಯ ಸಹಾಯಕ ಸಂಘಟನಾ ಆಯುಕ್ತರು ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಭಾರತ ಮತ್ತು ಗೈಡ್ಸ್ ಕರ್ನಾಟಕ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಾಧನೆ ಅನ್ನುವ ಬೀಜ ಯಾರ ಬಳಿಯಾದರೂ ಮೊಳಕೆ ಒಡೆಯಲು ಸಾಧ್ಯ ಶ್ರಮ ಪಟ್ಟರೆ ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಎಂಬ ಮಾತುಗಳ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮಾರ್ಗದರ್ಶನದ ಮಾತನಾಡಿದರು.

ಶಾಲಾ ಸಂಚಾಲಕ ರೆ.ಫಾ.ಪೌಲ್ ಜೇಕಬ್ ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿ ಸೈಮನ್.ಕೆ.ಸಿ, ಶಾಲಾಶಿಕ್ಷಕಿ ಜ್ಯೋತಿ ಯೆಸ್.ಕೆ ಗೈಡ್ ಶಿಕ್ಷಕಿ, ಪ್ರಿಯಾ.ಏ, ಸ್ಕೌಟ್ ಮಾಸ್ಟರ್ ವಿಶ್ವತ್.ಪಿ, ಶಾಲಾ ಶಿಕ್ಷಕರು, ಶಿಕ್ಷಕೇತರ ವರ್ಗ, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಹ ಶಿಕ್ಷಕಿ ಅಕ್ಷತಾ.ಕೆ ಸ್ವಾಗತಿಸಿದರು. ಸಂಗೀತ ವಂದಿಸಿದರು. ಪ್ರಭಾವತಿ ನಿರೂಪಿಸಿದರು.

Leave a Reply

You May Have Missed

error: Content is protected !!