ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ನಲ್ಲಿ ವಿನ್ಸೆಂಟ್ ಡಿ ಪೌಲ್ ಸಾಧಕರಿಗೆ ಸನ್ಮಾನ

ನೆಲ್ಯಾಡಿಯ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಸಮಾಜ ಸೇವೆಯಲ್ಲಿ ಮುಂದುವರಿದ ಹಿರಿಯರನ್ನು ಸೆ.29ರ ಆದಿತ್ಯವಾರದಂದು ಸನ್ಮಾನಿಸಲಾಯಿತು. ವಿನ್ಸೆಂಟ್ ಡಿ ಪೌಲ್ ಸಂಘದಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿಸಿದ ಹನ್ನೊಂದು ಮಂದಿ ಸಾಧಕರನ್ನು ಚರ್ಚ್ ವತಿಯಿಂದ ಗೌರವಿಸಲಾಯಿತು.
ಬಡ ಬಡವರಿಗೆ ಆಹಾರ, ಮಕ್ಕಳ ಶೈಕ್ಷಣಿಕ ಅಗತ್ಯಗಳಿಗೆ ಆರ್ಥಿಕ ಸಹಾಯ ಮತ್ತು ‘ದತ್ತು ಮನೆ’ ಯೋಜನೆಯಡಿ ಬಡ ಕುಟುಂಬಗಳಿಗೆ ಮಾಸಿಕ ಆರ್ಥಿಕ ನೆರವು ಒದಗಿಸುವುದೇ ಈ ಸಂಘಟನೆಯ ಮುಖ್ಯ ಉದ್ದೇಶ. ಇವರ ಸೇವೆಯನ್ನು ಧರ್ಮಗುರು ವಂ.ಫಾ.ಶಾಜಿ ಮಾತ್ಯು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಧರ್ಮ ಪ್ರಾಂತಿಯ ಪಾಲನಾ ಸಮಿತಿಯ ಜಿನೋಯ್, ಜೆಸ್ಸಿ ಕೆ.ಜೆ., ವಂ.ಸಿಸ್ಟರ್ ಲಿಸ್ ಮಾತ್ಯು, ಚರ್ಚ್ ಟ್ರಸ್ಟಿ ಅಲೆಕ್ಸ್ ಚೆಂಬಿತ್ತಾನಮ್ ಮತ್ತು ಇತರ ಪ್ರಮುಖ ವ್ಯಕ್ತಿಗಳು ಉಪಸ್ಥಿತರಿದ್ದರು.






















Leave a Reply