ಅ.14 ಕೊಕ್ಕಡ ಕೆನರಾ ಬ್ಯಾಂಕಿನ ದೌರ್ಜನ್ಯ, ಅಕ್ರಮ ವಿರೋಧಿ ಹೋರಾಟ ಸಮಿತಿಯಿಂದ ಧರಣಿ ಸತ್ಯಾಗ್ರಹ

ಕೊಕ್ಕಡ : ಕೊಕ್ಕಡ ಕೆನರಾ ಬ್ಯಾಂಕಿನ ದೌರ್ಜನ್ಯ, ಅಕ್ರಮ ವಿರೋಧಿ ಹೋರಾಟ ಸಮಿತಿಯಿಂದ ಧರಣಿ ಸತ್ಯಾಗ್ರಹ ಅ.14ರಂದು ಬೆಳಗ್ಗೆ 10 ಗಂಟೆಯಿಂದ ಕೊಕ್ಕಡ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ನಡೆಯಲಿದೆ.
ಕೊಕ್ಕಡ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರ ವಂಚನೆ ಲೂಟಿಗಳಿಂದ ಗ್ರಾಹಕರಿಗೆ ಆಗುತ್ತಿರುವ ಸಮಸ್ಯೆ, ಅನ್ಯಾಯಗಳನ್ನು ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಹಾಗೂ ವರದಿ ಬಹಿರಂಗಪಡಿಸಬೇಕು, ಎಲ್ಲಾ ಅನ್ಯಾಯಗಳನ್ನು ತಡೆಯಲು ಕೈಕೊಳ್ಳಬೇಕೆಂದು ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಆನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ ಕೊಕ್ಕಡ ಕೆನರಾ ಬ್ಯಾಂಕಿನ ದೌರ್ಜನ್ಯ, ಅಕ್ರಮ ವಿರೋಧಿ ಹೋರಾಟ ಸಮಿತಿಯಿಂದ ನಡೆಯಲಿದೆ ಎಂದು ಸಂಘಟಕರು ತಿಳಿಸಿದರು.






















Leave a Reply