ಕೊಕ್ರಾಡಿ ಪ್ರೌಢಶಾಲೆಯ ಅಕ್ಕಮ್ಮ ಅವರಿಗೆ ಶಿಕ್ಷಣ ರತ್ನ ರಾಜ್ಯ ಪ್ರಶಸ್ತಿ

ಕೊಕ್ರಾಡಿ ಪ್ರೌಢಶಾಲೆಯ ಅಕ್ಕಮ್ಮ ಅವರಿಗೆ ಶಿಕ್ಷಣ ರತ್ನ ರಾಜ್ಯ ಪ್ರಶಸ್ತಿ

ಬೆಳ್ತಂಗಡಿ: ಬೆಂಗಳೂರು ಸೂರ್ಯ ಫೌಂಡೇಶನ್(ರಿ), ಬೆಂಗಳೂರು ಸ್ಪಾರ್ಕ್ ಅಕಾಡೆಮಿ(ರಿ),ಬೆಂಗಳೂರು ಇಂಡೋಗ್ಲೋಬಲ್ ಇನ್ ಟ್ಯೂಷನ್, ಸಹಕಾರ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್(ರಿ) ಮೈಸೂರು ಸಹಯೋಗದಲ್ಲಿ ಅ.15ರಂದು ನಡೆದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಬೆಳ್ತಂಗಡಿ ತಾಲೂಕು ಕೊಕ್ರಾಡಿ ಪ್ರೌಢಶಾಲೆಯ ಅಕ್ಕಮ್ಮ ಅವರಿಗೆ ಶಿಕ್ಷಣ ರತ್ನ ಪ್ರಶಸ್ತಿ 2024 (ಪ್ರೌಢಶಾಲಾ ವಿಭಾಗ) ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಿಕ್ಷಣ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಾ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸೂಕ್ತ ಮಾರ್ಗದರ್ಶನ ನೀಡುತ್ತಿರುವ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಾ ಉತ್ತಮ ಸಾಧಕರಾಗಿ ಶಿಷ್ಟ ಶಿಕ್ಷಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಇವರ ಅನುಪಮ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Leave a Reply

You May Have Missed

error: Content is protected !!