ಕಿರಿಯ ಕುಸುಮ ಮಿಷನ್ ಲೀಗ್ ಉದನೆ ವಲಯ ಸಾಂಸ್ಕೃತಿಕ ವೈಭವ

ಕಿರಿಯ ಕುಸುಮ ಮಿಷನ್ ಲೀಗ್ ಉದನೆ ವಲಯ ಸಾಂಸ್ಕೃತಿಕ ವೈಭವ

ನೆಲ್ಯಾಡಿ ಸಂತ ಅಲ್ಫೋನ್ಸ ಸಭಾಂಗಣದಲ್ಲಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ 15ವರ್ಷದೊಳಗಿನ ಬಾಲಕ ಬಾಲಕಿಯರ ಕಿರಿಯ ಕುಸುಮ ಮಿಷನ್ ಲೀಗ್ ಇದರ ದ್ವೈವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು.

ನೆಲ್ಯಾಡಿ ಸೆಂಟ್ ಅಲ್ಫೋನ್ಸ ಪುಣ್ಯ ಕ್ಷೇತ್ರ ಪ್ರಥಮ, ಸೆಂಟ್ ಮೇರಿಸ್ ಆರ್ಲ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

ಕಾರ್ಯಕ್ರಮದಲ್ಲಿ ಉದನೆ ಸೆಂಟ್ ತೋಮಸ್ ಫೋರೆನ್ ಚರ್ಚ್ ನ ಧರ್ಮಗುರುಗಳಾದ ವಂ.ಫಾ.ಸಿಬಿ ತೋಮಸ್ ಪನಚಿಕ್ಕಲ್, ಫಾ.ಜೋಸೆಫ್ ಪೂದಕ್ಕುಯಿ, ಶಿರಾಡಿ ರೊಯ್ ನೆಲ್ಯಾಡಿ, ಟೊಮಿ ಮಟ್ಟಮ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು. ನೆಲ್ಯಾಡಿ ಚರ್ಚ್ ನ ವಂ.ಫಾಶಾಜಿ ಮಾತ್ಯು ವಿಜೇತರನ್ನು ಅಭಿನಂದಿಸಿದರು. ಅಡ್ಡಹೊಳೆ ಸೆಂಟ್ ಜೋಸೆಫ್ ಚರ್ಚ್ ನ ವ.ಫಾ.ಜೋಸೆಫ್ ಪಾòಪಕಲ್ ಕಾರ್ಯಕ್ರಮದ ಮುಖ್ಯ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದರು.

Leave a Reply

You May Have Missed

error: Content is protected !!