ಟ್ಯಾಂಕರ್ ಪಲ್ಟಿ ಡೀಸೆಲ್‌ ಸೋರಿಕೆ; ವಾಹನ ಸಂಚಾರಕ್ಕೆ ಅಡ್ಡಿ

ಟ್ಯಾಂಕರ್ ಪಲ್ಟಿ ಡೀಸೆಲ್‌ ಸೋರಿಕೆ; ವಾಹನ ಸಂಚಾರಕ್ಕೆ ಅಡ್ಡಿ

ನೆಲ್ಯಾಡಿ: ಚಾಲಕನ ನಿಯಂತ್ರಣ ತಪ್ಪಿ ಡೀಸೆಲ್ ಸಾಗಾಟ ಟ್ಯಾಂಕರ್ ರಸ್ತೆ ಮದ್ಯೆ ಪಲ್ಟಿಯಾದ ಘಟನೆ ಮಾಣಿ ಮೈಸೂರು ಹೆದ್ದಾರಿಯ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಬೈತಡ್ಕ ತಿರುವಿನಲ್ಲಿ ಅ.30ರ ಬುಧವಾರ ಸಂಭವಿಸಿದೆ.

ಮಂಗಳೂರಿನಿಂದ ಮಡಿಕೇರಿ ಕಡೆಗೆ ಡೀಸೆಲ್ ಸಾಗಾಟದ ಟ್ಯಾಂಕರ್ ಬೈತಡ್ಕ ತಿರುವಿನಲ್ಲಿ ರಸ್ತೆ ಮಧ್ಯೆ ಪಲ್ಟಿಯಾಗಿದ್ದು, ಘಟನೆಯಿಂದ ಟ್ಯಾಂಕರ್ ನಲ್ಲಿ ಡೀಸಲ್ ಸೋರಿಕೆಯಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ, ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆಯಿಂದ ಚಾಲಕನಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆ ಪರಿಣಾಮ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.

Leave a Reply

You May Have Missed

error: Content is protected !!