ತೆಂಗು ಎಸೆದ ಮಂಗ: ಮಹಿಳೆಗೆ ಗಾಯ

ತೆಂಗು ಎಸೆದ ಮಂಗ: ಮಹಿಳೆಗೆ ಗಾಯ

ಮುಳಿಯಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳತ್ತಿಂಗಳ್ ಎಂಬಲ್ಲಿ ಕೋತಿಯೊಂದು ಮಹಿಳೆಯ ಮೇಲೆ ತೆಂಗಿನಕಾಯಿ ಎಸೆದಿದೆ.

ಕೃಷ್ಣನ್ ನಾಯರ್ ಎಂಬುವರ ಪತ್ನಿ ಸಾವಿತ್ರಿ ಅವರು ಮನೆಯ ಅಂಗಳದಲ್ಲಿ ಪಾತ್ರೆ ತೊಳೆಯುತ್ತಿದ್ದಾಗ ಅವಘಡ ನಡೆದಿದೆ. ಸಾವಿತ್ರಿ ಅವರ ಕೈ ಮೂಳೆ ಮುರಿದಿದ್ದು, ಚಿಕಿತ್ಸೆ ನೀಡಲಾಗಿದೆ. ಈ ಪ್ರದೇಶದಲ್ಲಿ ಕಾಡುಪ್ರಾಣಿಗಳು ನಿರಂತರವಾಗಿ ಕೃಷಿ ನಾಶ ಮಾಡುತ್ತಿದ್ದು, ಸ್ಥಳೀಯ ನಿವಾಸಿಗಳ ಮೇಲೆ ದಾಳಿ ಮಾಡುತ್ತಿವೆ.

Leave a Reply

You May Have Missed

error: Content is protected !!