ನೆಲ್ಯಾಡಿ: ಪುತ್ಯೆ ಕಂರ್ಬಿಲ ನಿವಾಸಿ ಕಾಶ್ಮಿರ್ ಡಿಸೋಜ ನಿಧನ

ನೆಲ್ಯಾಡಿ: ಪುತ್ಯೆ ಕಂರ್ಬಿಲ ನಿವಾಸಿ ಕಾಶ್ಮಿರ್ ಡಿಸೋಜ ನಿಧನ

ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ಪುತ್ಯೆ ಕಂರ್ಬಿಲ ನಿವಾಸಿ ಕಾಶ್ಮಿರ್ ಡಿಸೋಜ (75) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಸ್ವಗೃಹದಲ್ಲಿ ಅ.4ರಂದು ನಿಧನರಾದರು.

ಉತ್ತಮ ಪ್ರಗತಿಪರ ಕೃಷಿಕರಾಗಿದ್ದು, ಕರ್ನಾಟಕ ಸರಕಾರ ಕೃಷಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಮಟ್ಟದಲ್ಲಿ 2017-18 ನೇ ಸಾಲಿನ ಆತ್ಮ ಯೋಜನೆಯಡಿ ಹೈನುಗಾರಿಕೆ ವಿಭಾಗದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದಿರುತ್ತಾರೆ. ಸಂತ ಜೋನರ ದೇವಾಲಯ ಕೊಕ್ಕಡದ ವಾಳ್ಯದ ಗುರಿಕಾರರಾಗಿ ಸೇವೆ ಸಲ್ಲಿಸಿದ್ದಾರೆ.

ಮೃತರು ಪತ್ನಿ ದುಲ್ಸಿನ್ ಫೆರಾವೊ, ಮಕ್ಕಳಾದ ಲೂಯಿಸ್, ಗ್ರೆಗರಿ, ಪ್ರಸನ್ನ ಮತ್ತು ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Leave a Reply

You May Have Missed

error: Content is protected !!