ಚಿಲ್ಲರೆ ವಿಚಾರದಲ್ಲಿ ಸರಕಾರಿ ಬಸ್ ನಿರ್ವಾಹಕನಿಗೆ ಕಪಾಳಮೋಕ್ಷ

ಚಿಲ್ಲರೆ ವಿಚಾರದಲ್ಲಿ ಸರಕಾರಿ ಬಸ್ ನಿರ್ವಾಹಕನಿಗೆ ಕಪಾಳಮೋಕ್ಷ

ವಿಟ್ಲ: ಸರ್ಕಾರಿ ಬಸ್ ನಿರ್ವಾಹಕನಿಗೆ ಪ್ರಯಾಣಿಕನೊಬ್ಬ ಚಿಲ್ಲರೆ ಹಣದ ವಿಚಾರದಲ್ಲಿ ಕಪಾಳಮೋಕ್ಷ ಮಾಡಿದ ಘಟನೆ ವಿಟ್ಲ ಸಮೀಪ ನಡೆದಿದೆ.

ಪುತ್ತೂರು-ವಿಟ್ಲ-ಕುಳಾಲು ಸಂಚರಿಸುವ ಸರ್ಕಾರಿ ಬಸ್ ಗುರುವಾರ ಬೆಳಗ್ಗೆ ಎಂದಿನಂತೆ ಪುತ್ತೂರಿನಿಂದ ಬಂದು ಕೊಳ್ನಾಡು ಗ್ರಾಮದ ಕುಳಾಲು ತಲುಪಿ ಮತ್ತೆ ಪುತ್ತೂರಿನತ್ತ ಹೊರಟಿತ್ತು ‌ಬಸ್ಸಿನಲ್ಲಿದ್ದ ಪ್ರಯಾಣಿಕನೊಬ್ಬ ಚಿಲ್ಲರೆ ನೀಡುವ ವಿಚಾರದಲ್ಲಿ ನಿರ್ವಾಹಕನ ಜೊತೆ ಮಾತಿನ ಚಕಮಕಿ ನಡೆಸಿ ಮರುಕ್ಷಣದಲ್ಲೇ ನಿರ್ವಾಹಕನ ಕೆನ್ನೆಗೆ ಬಾರಿಸಿದ್ದಾನೆ. ಹಲ್ಲೆಯಿಂದಾಗಿ ಕಿವಿಯಲ್ಲಿ ರಕ್ತ ಸೋರುತ್ತಿದ್ದರೂ ಬಸ್ ಚಾಲಕ ಮತ್ತು ನಿರ್ವಾಹಕ ಬಸ್ಸನ್ನು ವಿಟ್ಲ ಠಾಣೆಯ ಮುಂಭಾಗ ನಿಲ್ಲಿಸಿ ಆರೋಪಿಯನ್ನು ಠಾಣೆಗೆ ಕರೆದೊಯ್ದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

Leave a Reply

You May Have Missed

error: Content is protected !!