ಇಚ್ಲಂಪಾಡಿ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

ಇಚ್ಲಂಪಾಡಿ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

ಇಚ್ಲಂಪಾಡಿ:ನೇರ್ಲ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಮಮತಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಅಂಗನವಾಡಿ ಮೇಲ್ವಿಚಾರಕಿ ಪುಷ್ಪಾವತಿ.ಡಿ.ಎಂ., ಸಮುದಾಯ ಆರೋಗ್ಯ ಅಧಿಕಾರಿ ಶ್ಯಾಮಲ, ಆಶಾ ಕಾರ್ಯಕರ್ತೆ ಸುಜಿ, ಪಂಚಾಯತ್ ಸದಸ್ಯೆ ಡೈಸಿ ವರ್ಗಿಸ್, ನೇರ್ಲ ಶಾಲಾ ಅಧ್ಯಕ್ಷ ವಸಂತ ಬಿಜೇರು, ಅಂಗನವಾಡಿ ಕಾರ್ಯಕರ್ತೆ ತಂಗಮ್ಮ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಪುಟಾಣಿಗಳಿಗೆ ಆಯೋಜಿಸಿದ ವಿವಿಧ ಆಟೋಟ ಸ್ಪರ್ಧೆಗಳ ಬಹುಮಾನವನ್ನು ವಿತರಿಸಲಾಯಿತು. ಸ್ತ್ರೀ ಶಕ್ತಿ ಸಂಘದ ಸದಸ್ಯರುಗಳು, ಅಂಗನವಾಡಿ ಮಕ್ಕಳ ಪೋಷಕರು ಮತ್ತು ಅಂಗನವಾಡಿ ಪುಟಾಣಿಗಳು ಭಾಗವಹಿಸಿದ್ದರು. ಮೋಹಿನಿ ಬಿಜೇರು ನಿರೂಪಿಸಿದರು. ಅಂಗನವಾಡಿ ಸಹಾಯಕಿ ಸುಲೋಚನ ವಂದಿಸಿದರು.

Leave a Reply

You May Have Missed

error: Content is protected !!