ಇಚಿಲಂಪಾಡಿ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘದಿಂದ ರಸ್ತೆಯ ನಾಮಫಲಕ ಅನಾವರಣ

ಇಚಿಲಂಪಾಡಿ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘದಿಂದ ರಸ್ತೆಯ ನಾಮಫಲಕ ಅನಾವರಣ

ಇಚಿಲಂಪಾಡಿ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘ ಇದರ ಶ್ರೀ ನಾರಾಯಣ ಗುರು ಮಂದಿರಕ್ಕೆ ತೆರಳುವ ರಸ್ತೆಯ ನಾಮಫಲಕವನ್ನು ಸಂಘದ ಸ್ಥಾಪಕ ಸದಸ್ಯರಾದ ದಿ.ನಾರಾಯಣ ಪೂಜಾರಿ ಪೊಯ್ಯೆತ್ತಡ್ಡ ಇವರ ಸವಿನೆನಪಿನಲ್ಲಿ ನ.24ರಂದು ಅನಾವರಣಗೊಳಿಸಲಾಯಿತು.

ಇಚಿಲಂಪಾಡಿ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಗೌರವಾಧ್ಯಕ್ಷರಾದ ಇಂದ್ರ ಪೂಜಾರಿ ಬದನೆ ಅವರು ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ನಾಮಫಲಕದ ಕೊಡುಗೆ ನೀಡಿದ ದೇವಿಪ್ರಸಾದ್ ಪೊಯ್ಯೆತ್ತಡ್ಡಅವರನ್ನು ಅಭಿನಂದಿಸಿದರು.

ಸಂಘದ ಅಧ್ಯಕ್ಷರಾದ ಶ್ರೀನಿವಾಸ ಪೂಜಾರಿ ನಿಡ್ಯಡ್ಕ, ಸಮಾಜದ ಹಿರಿಯರಾದ ಜಾನಪ್ಪ ಪೂಜಾರಿ ಪಟ್ಟೆಗುಡ್ಡೆ, ನಾರಾಯಣ ಪೂಜಾರಿ ಬರೆಮೇಲು, ಊರ ಪ್ರಮುಖರಾದ ಉದಯ ಕುಮಾರ್ ಶೆಟ್ಟಿ ಹೊಸಮನೆ ಹಾಗು ಇತರ ಗಣ್ಯರು ಉಪಸ್ಥಿತರಿದ್ದರು.

    Leave a Reply

    You May Have Missed

    error: Content is protected !!