ಶಿರಾಡಿ: ಕಾಡಾನೆಗಳ ದಾಳಿ-ಅಡಿಕೆ ಗಿಡ ನಾಶ

ಶಿರಾಡಿ: ಕಾಡಾನೆಗಳ ದಾಳಿ-ಅಡಿಕೆ ಗಿಡ ನಾಶ

ನೆಲ್ಯಾಡಿ: ಕಡಬ ತಾಲೂಕಿನ ಶಿರಾಡಿ ಗ್ರಾಮದಲ್ಲಿ ಕಳೆದ ರಾತ್ರಿ ಕಾಡಾನೆಗಳು ದಾಳಿ ನಡೆಸಿ ಅಡಿಕೆ ಗಿಡ ನಾಶಗೊಳಿಸಿರುವ ಘಟನೆ ನಡೆದಿದೆ.

ಶಿರಾಡಿ ಗ್ರಾಮದ ತೆಕ್ಕನಾಟ್ ನಿವಾಸಿ ಟಿ.ಎ.ತೋಮಸ್ ಎಂಬವರಿಗೆ ಸೇರಿದ ಅಡಿಕೆ ತೋಟಕ್ಕೆ ನ.24ರಂದು ಮಧ್ಯರಾತ್ರಿ ಕಾಡಾನೆಗಳ ಗುಂಪು ದಾಳಿ ನಡೆಸಿದ್ದು 100ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ನಾಶಗೊಳಿಸಿವೆ.

ಶಿರಾಡಿ ಗ್ರಾಮದ ಇತರೇ ಕಡೆಯೂ ಕೃಷಿ ತೋಟಕ್ಕೆ ಕಾಡಾನೆಗಳು ದಾಳಿ ಮಾಡಿದ್ದು ಅಡಿಕೆ, ಬಾಳೆ ಕೃಷಿ ನಾಶಗೊಳಿಸಿವೆ. ಕಾಡಾನೆಗಳನ್ನು ಸ್ಥಳಾಂತರಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leave a Reply

You May Have Missed

error: Content is protected !!