ಹೆಜ್ಜೇನು ದಾಳಿಯಿಂದ ಕಕ್ಕಿಂಜೆ ಶಾಲೆಯ 10 ಮಕ್ಕಳು ಅಸ್ವಸ್ಥ

ಹೆಜ್ಜೇನು ದಾಳಿಯಿಂದ ಕಕ್ಕಿಂಜೆ ಶಾಲೆಯ 10 ಮಕ್ಕಳು ಅಸ್ವಸ್ಥ

ಬೆಳ್ತಂಗಡಿ: ಕಕ್ಕಿಂಜೆ ಹಿ.ಪ್ರಾ ಶಾಲೆಯಲ್ಲಿ ಮಕ್ಕಳ ಮೇಲೆ ಹಜ್ಜೆನು ದಾಳಿ ನಡೆಸಿದ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದ್ದು ಸುಮಾರು 10ಮಕ್ಕಳು ಹೆಜ್ಜೇನು ದಾಳಿಯಿಂದ ಅಸ್ವಸ್ಥರಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಕ್ಕಳು ಶಾಲೆಯಲ್ಲಿ ಇದ್ದ ವೇಳೆ ಏಕಾಏಕಿ ಹೆಜ್ಜೇನು ದಾಳಿ ನಡೆಸಿದೆ. ಮಕ್ಕಳು ಚಲ್ಲಾಪಿಲ್ಲಿಯಾಗಿ ಓಡಿದ್ದು ಹಲವರಿಗೆ ಹೆಜ್ಜೇನು ಕಚ್ಚಿದೆ. ಮಕ್ಕಳ ಅಳು ಕೇಳಿ ಸ್ಥಳೀಯರು ಶಾಲೆಗೆ ಧಾವಿಸಿದ್ದು ಮಕ್ಕಳನ್ನು ರಕ್ಷಿಸುವ ಪ್ರಯತ್ನ ನಡೆಸಿದ್ದಾರೆ. ಹಲವು ಮಕ್ಕಳಿಗೆ ಈ ವೇಳೆ ಹಜ್ಜೇನು ಕಚ್ಷಿದ್ದು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.ಮಕ್ಕಳು ಅಸ್ವಸ್ಥರಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.

ಶಾಲೆಯ ಸುತ್ತ ಹೆಜ್ಜೇನುಗಳು ಸುತ್ತಾಡುತ್ತಿದ್ದು ಸ್ಥಳೀಯರು ಬೆಂಕಿ ಹೊಗೆ ಹಾಕಿ ಹೆಜ್ಜೇನುಗಳನ್ನು ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ

  •  

Leave a Reply

You May Have Missed

error: Content is protected !!