ಅರೆಪ್ರಜ್ಞೆಯಲ್ಲಿ ಪತ್ತೆಯಾದ ಯುವತಿ – ಗ್ಯಾಂಗ್ ರೇಪ್ ಯತ್ನ ಶಂಕೆ, ಮೂವರು ಬಂಧನ

Mangalore

ಅರೆಪ್ರಜ್ಞೆಯಲ್ಲಿ ಪತ್ತೆಯಾದ ಯುವತಿ – ಗ್ಯಾಂಗ್ ರೇಪ್ ಯತ್ನ ಶಂಕೆ, ಮೂವರು ಬಂಧನ

ಮಂಗಳೂರು: ನಗರ ಹೊರವಲಯದ ಕಲ್ಲಾಪು ಬಳಿ ನಿರ್ಜನ ಪ್ರದೇಶದಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿರುವ ಹೊರರಾಜ್ಯದ ಯುವತಿಯೊಬ್ಬಳು ಪತ್ತೆಯಾದ ಘಟನೆ ಚಕಿತ ಉಂಟುಮಾಡಿದೆ. ಯುವತಿಯ ಮೈಮೇಲೆ ಗಾಯದ ಗುರುತುಗಳು ಕಂಡುಬಂದಿದ್ದು, ಸಾಮೂಹಿಕ ಅತ್ಯಾಚಾರದ ಯತ್ನ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಉಳ್ಳಾಲ ಠಾಣೆ ಪೊಲೀಸರು ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಪಶ್ಚಿಮ ಬಂಗಾಳದ ಉದ್ಯೋಗ ಹುಡುಕಿಕೊಂಡು ಕೇರಳದ ಉಪ್ಪಳಕ್ಕೆ ಬಂದಿದ್ದ ಯುವತಿ, ತನ್ನ ಸ್ನೇಹಿತನೊಂದಿಗೆ ಮಂಗಳೂರಿಗೆ ಆಗಮಿಸಿದ್ದಳು. ಮಧ್ಯರಾತ್ರಿಯ ವೇಳೆ ಗಲಾಟೆ ಬಳಿಕ ಮನೆಯಿಂದ ಒಬ್ಬಳೇ ಹೊರ ಬಂದಿದ್ದಳು. ಈ ವೇಳೆ ಸಿಕ್ಕ ರಿಕ್ಷಾ ಚಾಲಕನಿಗೆ ಸಹಾಯ ಕೇಳಿದ್ದಳು ಎನ್ನಲಾಗಿದೆ.

ಆರೋಪಿಗಳಾದ ರಿಕ್ಷಾ ಚಾಲಕ ಹಾಗೂ ಆತನ ಇಬ್ಬರು ಸ್ನೇಹಿತರು ಯುವತಿಗೆ ಅಮಲು ಪದಾರ್ಥ ನೀಡಿದ ನಂತರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರದ ಯತ್ನ ನಡೆಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

  •  
Previous post

ಶ್ರೀ ಕ್ಷೇತ್ರ ಧರ್ಮಸ್ಥಳದ ವಾತ್ಸಲ್ಯ ಮನೆ ಹಸ್ತಾಂತರ – ರೇವತಿಯವರಿಗೆ ಮಾತೃಶ್ರೀ ಹೇಮಾವತಿ ಅಮ್ಮನವರಿಂದ ಆಶೀರ್ವಾದ

Next post

ಪುತ್ತೂರು ಮಹಾಲಿಂಗೇಶ್ವರ ದೇವಳದಲ್ಲಿ ಬ್ರಹ್ಮರಥೋತ್ಸವದ ಅದ್ದೂರಿ ವೈಭವ – ಭಕ್ತಸಾಗರದ ನಡುವೆ ದೇವರ ರಥೋತ್ಸವ

Leave a Reply

You May Have Missed

error: Content is protected !!