ಅಕ್ಷಯ ತೃತೀಯದ ಚಿನ್ನದ ಖರೀದಿ- ಧರ್ಮ ಪರಂಪರೆ – ಪುತ್ತೂರು ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ವಿಚಾರ ಸಂಕಿರಣ

ಪುತ್ತೂರು ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್

ಅಕ್ಷಯ ತೃತೀಯದ ಚಿನ್ನದ ಖರೀದಿ- ಧರ್ಮ ಪರಂಪರೆ – ಪುತ್ತೂರು ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ವಿಚಾರ ಸಂಕಿರಣ

ಪುತ್ತೂರು: ಎ.24 ಸಂಜೆ 4 ಗಂಟೆಗೆ ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಅಕ್ಷಯ ನದಿಗೆ ದಿನದಂದು ಜನ ಚಿನ್ನದ ಖರೀದಿ ಯಾಕೆ ಮಾಡುತ್ತಾರೆ . ಇದರ ಧಾರ್ಮಿಕ ಪರಂಪರೆ ಕಾರಣಗಳು ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆ .

ಈ ಕಾರ್ಯಕ್ರಮದಲ್ಲಿ ಕುಂಟಾರು ರವೀಶ್ ತಂತ್ರಿಗಳು, ಪಂಜ ಭಾಸ್ಕರ ಭಟ್, ವಂದನಾಶಂಕರ್ ಇವರು ತಮ್ಮ ವಿಚಾರಧಾರೆಯನ್ನು ಮಂಡಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್ಟ ಭಾಗವಹಿಸಲಿರುವರು. ಈ ಸಂವಾದ ಕಾರ್ಯಕ್ರಮವನ್ನು ಡಾ.ವಿಜಯ ಸರಸ್ವತಿ ನಡೆಸಿಕೊಡುವವರು.

ಚಿನ್ನದ ಹೂಡಿಕೆ, ಮೌಲ್ಯ ವೃದ್ಧಿ ಹಾಗು ಹಲವು ಧಾರ್ಮಿಕ ಮತ್ತು ವೈಚಾರಿಕ ವಿಷಯಗಳ ಕುರಿತು ವಿಚಾರ ವಿನಿಮಯ ನಡೆಯಲಿದೆ. ಆಸಕ್ತರು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಸಂಸ್ಥೆಯ ಚೇರ್ಮನ್ ಕೃಷ್ಣ ಪ್ರಸಾದ್ ಮುಳಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  •  
Previous post

ಸೇವಾಭಾರತಿ ತಂಡದಿಂದ ರಾಜ್ಯಸಭಾ ಸದಸ್ಯರಾದ ಡಾ. ಡಿ ವೀರೇಂದ್ರ ಹೆಗ್ಗಡೆ ಭೇಟಿ

Next post

ಬೆಳ್ತಂಗಡಿ: ಸಿಇಟಿ ಪರೀಕ್ಷೆಯಲ್ಲಿ ಜನಿವಾರ ಕತ್ತರಿಸಿದ ಘಟನೆ ಖಂಡಿಸಿ ಬ್ರಾಹ್ಮಣ ಸಂಘಗಳ ಮನವಿ – ಸರ್ಕಾರದಿಂದ ಕಠಿಣ ಕ್ರಮಕ್ಕೆ ಒತ್ತಾಯ

Leave a Reply

You May Have Missed

error: Content is protected !!