ಗಡಿಯಾರ: ಬೈಕಿಗೆ ಲಾರಿ ಡಿಕ್ಕಿ -ಗಂಭೀರ ಗಾಯಗೊಂಡ ವಿದ್ಯಾರ್ಥಿ

ಗಡಿಯಾರ: ಬೈಕಿಗೆ ಲಾರಿ ಡಿಕ್ಕಿ -ಗಂಭೀರ ಗಾಯಗೊಂಡ ವಿದ್ಯಾರ್ಥಿ

ನೇಸರ ಮಾ.07: ರಾಷ್ಟ್ರೀಯ ಹೆದ್ದಾರಿ ಮಂಗಳೂರು – ಬೆಂಗಳೂರಿನ ಮಧ್ಯೆ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ತಂದೆಯೊಂದಿಗೆ ತೆರಳುತ್ತಿದ್ದ ವೇಳೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ವರದಿಯಾಗಿದೆ.
ಬುಡೋಳಿಯ ವಿಸ್ಡ್ ಮ್ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಅದ್ವಿತ್ ಸಂಜೆ ಶಾಲೆ ಬಿಟ್ಟು ತಂದೆ ದಿನೇಶ ರವರ ಜೊತೆ ಮನೆಗೆ ಬೈಕ್ ನಲ್ಲಿ ಹಿಂದಿರುಗುತ್ತಿದ್ದ ವೇಳೆ ಮಂಗಳೂರಿನಿಂದ – ಬೆಂಗಳೂರಿನ ಕಡೆಗೆ ತೆರಳುತ್ತಿದ್ದ ಲಾರಿ ಡಿಕ್ಕಿ ಹೊಡೆದು ಪರಾರಿಯಾಗಿದೆ. ನೆಲ್ಯಾಡಿಯ ಸಮೀಪ ಲಾರಿಯನ್ನು ಸ್ಥಳೀಯರು ಪತ್ತೆಹಚ್ಚಿ ಲಾರಿ ಹಾಗೂ ಚಾಲಕನನ್ನು ನೆಲ್ಯಾಡಿಯ ಹೊರಠಾಣೆಯ ಪೊಲೀಸರ ವಶಕ್ಕೆ ನೀಡಿದ್ದಾರೆ. ದಿನೇಶ್ ರವರಿಗೆ ಗಾಯವಾಗಿದ್ದು, ಬಾಲಕ ಗಂಭೀರ ಗಾಯ ಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Previous post

ಜೇಸಿಐ ಕೊಕ್ಕಡ ಕಪಿಲ,ಜೂನಿಯರ್ ಜೇಸಿ ವಿಭಾಗದ ವತಿಯಿಂದ ಸೂಪರ್ ಸಿಕ್ಸ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ

Next post

ಪುಣ್ಯ ಪುಷ್ಕರಿಣಿಗೊಂದು ಉಪ ಕೆರೆ ತೀರ್ಥ ಸ್ನಾನಕ್ಕಾಗಿ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇಗುಲದಲ್ಲಿ ವಿನೂತನ ಯೋಜನೆ

Leave a Reply

You May Have Missed

error: Content is protected !!