ಎಸ್ ಎಸ್ ಎಲ್ ಸಿ ಫಲಿತಾಂಶ : ನೆಲ್ಯಾಡಿ ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜು ಶೇ. 100 ಫಲಿತಾಂಶ

ನೆಲ್ಯಾಡಿ ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜು ಶೇ. 100 ಫಲಿತಾಂಶ

ಎಸ್ ಎಸ್ ಎಲ್ ಸಿ ಫಲಿತಾಂಶ : ನೆಲ್ಯಾಡಿ ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜು ಶೇ. 100 ಫಲಿತಾಂಶ

ನೆಲ್ಯಾಡಿ: 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ನೆಲ್ಯಾಡಿಯ ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜು ಮತ್ತೊಮ್ಮೆ ಶೇ.100 ಫಲಿತಾಂಶ ಪಡೆದು ಶ್ರೇಷ್ಠತೆ ಸಾಧಿಸಿದೆ.

ಈ ಶೈಕ್ಷಣಿಕ ಸಂಸ್ಥೆಯ ವಿದ್ಯಾರ್ಥಿಗಳಲ್ಲಿ ಹಿಶಾಂತ್ 618 ಅಂಕಗಳನ್ನು ಪಡೆದು ರಾಜ್ಯದಲ್ಲಿ 7ನೇ ಸ್ಥಾನ ಹಾಗೂ ಜೆಫಿನ್ 617 ಅಂಕಗಳೊಂದಿಗೆ 8ನೇ ಸ್ಥಾನ ಪಡೆಯುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ.

ಒಟ್ಟು 83 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 37 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 39 ಮಂದಿ ಪ್ರಥಮ ಶ್ರೇಣಿಯಲ್ಲಿ ಹಾಗೂ 6 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ ಹೀಗಿದೆ:
ಹಿಶಾಂತ್ (618), ಜೆಫಿನ್ (617), ಧನ್ವಿ ಶೆಟ್ಟಿ (613), ರೇಖಿಲ್ (612), ಜಾಸ್ಮಿನ್ ಟಿ.ಜೆ (609), ಲಿಖಿತ್ (609), ಶೆರಿನ್ ಸುನಿಲ್ (606), ಪ್ರಾಪ್ತಿ (606), ಶ್ರೀವಿದ್ಯಾ (604), ಜೆರೆಮಿ ಜೋಸ್ (598), ಸನನ್ವಿತಾ (598), ಸ್ಪೂರ್ತಿ ಬಿ.ಎ (595), ಸಾರ್ಥಕ್ (594), ಧನ್ವಿ ಸಿ.ಪಿ (584), ಜೀವನ್ (585), ರಿಯಾ ಅಗಸ್ಟಿನ್ (583), ಅನನ್ಯ ಪಿ.ಕೆ (581), ಲೆವಿನ್ (580), ರಾಫೆಲ್ (580), ಸಾಯೂಜ್ಯಾ ಸುನಿಲ್ (580), ಸಮೃದ್ದ್ (575), ಅಲ್ವಿನ್ (571), ಫಾತಿಮತ್ ಫಸೀಲಾ (571), ಶ್ರೇಯಸ್ ಕೃಷ್ಣ (571), ಶಯಾನ್ ಮೂಸ (560), ಅಲೋನ (559), ಅನ್ಸಿಲಿನಾ (557), ಶಮಿತ್ (556), ಸೃಜನ್ (556), ಕೃತಿಕಾ ಬಿ.ಆರ್ (555), ಮುರ್ಷಿದಾ ಬಾನು (555), ಸ್ಪೂರ್ತಿ ಎಸ್ (550), ಜಾಸ್ಮಿನ್ ಪಿ.ವಿ (545), ಕೃತಿಕಾ ಬಿ.ವಿ (542), ವಿರಾಜ್ (537), ರಿಫಾ (532), ಅನ್‍ಶಿಯಾ (532)ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.

ಯಶಸ್ಸಿಗೆ ಕಾರಣರಾದ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಸಂಸ್ಥೆಯ ಸಿಬ್ಬಂದಿಗೆ ಸಂಸ್ಥೆಯ ಸಂಚಾಲಕರಾದ ರೆ.ಫಾ. ಜೈಸನ್ ಸೈಮನ್ ಒಐಸಿ ಹಾಗೂ ಪ್ರಾಚಾರ್ಯರಾದ ರೆ.ಫಾ.ಡಾ. ವರ್ಗೀಸ್ ಕೈಪನಡ್ಕ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

  •  
Previous post

ಎಸ್ ಎಸ್ ಎಲ್ ಸಿ ಫಲಿತಾಂಶ: ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆ ಆಂಗ್ಲ ಮಾಧ್ಯಮ ಶೇ.100 ಫಲಿತಾಂಶ

Next post

ರಾಜ್ಯ ಮಟ್ಟದಲ್ಲಿ ಸಾಧನೆ: ನೆಲ್ಯಾಡಿ ಜ್ಞಾನೋದಯ ಬೆಥನಿ ಕಾಲೇಜಿನ ಹಿಶಾಂತ್ ಮತ್ತು ಜೆಫಿನ್ ರಾಜ್ಯಕ್ಕೆ ಕೀರ್ತಿ ತಂದ ಯುವ ಪ್ರತಿಭೆಗಳು

Leave a Reply

You May Have Missed

error: Content is protected !!