ರಾಜ್ಯ ಮಟ್ಟದಲ್ಲಿ ಸಾಧನೆ: ನೆಲ್ಯಾಡಿ ಜ್ಞಾನೋದಯ ಬೆಥನಿ ಕಾಲೇಜಿನ ಹಿಶಾಂತ್ ಮತ್ತು ಜೆಫಿನ್ ರಾಜ್ಯಕ್ಕೆ ಕೀರ್ತಿ ತಂದ ಯುವ ಪ್ರತಿಭೆಗಳು

ಹಿಶಾಂತ್ ಮತ್ತು ಜೆಫಿನ್ ಅವರಿಗೆ ರಾಜ್ಯದಲ್ಲಿ 7ನೇ ಹಾಗೂ 8ನೇ ಸ್ಥಾನ

ರಾಜ್ಯ ಮಟ್ಟದಲ್ಲಿ ಸಾಧನೆ: ನೆಲ್ಯಾಡಿ ಜ್ಞಾನೋದಯ ಬೆಥನಿ ಕಾಲೇಜಿನ ಹಿಶಾಂತ್ ಮತ್ತು ಜೆಫಿನ್ ರಾಜ್ಯಕ್ಕೆ ಕೀರ್ತಿ ತಂದ ಯುವ ಪ್ರತಿಭೆಗಳು

ನೆಲ್ಯಾಡಿ: 2025ನೇ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕಡಬ ತಾಲೂಕಿನ ನೆಲ್ಯಾಡಿ ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜು ಶೇ.100 ಫಲಿತಾಂಶವನ್ನು ದಾಖಲಿಸಿದೆ. ಈ ಕಾಲೇಜಿನ ವಿದ್ಯಾರ್ಥಿಗಳಾದ ಹಿಶಾಂತ್ ಮತ್ತು ಜೆಫಿನ್ ರಾಜ್ಯ ಮಟ್ಟದಲ್ಲಿ ಶ್ರೇಷ್ಠ ಸಾಧನೆಗೈದು ಕೀರ್ತಿ ತಂದಿದ್ದಾರೆ.

ಹಿಶಾಂತ್ 618 ಅಂಕಗಳನ್ನು (98.88%) ಪಡೆದು ರಾಜ್ಯದ 7ನೇ ಸ್ಥಾನವನ್ನು ಗಳಿಸಿದ್ದು, ಜೆಫಿನ್ 617 ಅಂಕಗಳನ್ನು (98.72%) ಪಡೆದು ರಾಜ್ಯದ 8ನೇ ಸ್ಥಾನವನ್ನು ಪಡೆದಿದ್ದಾರೆ.

ಹಿಶಾಂತ್ ಇವರು ಮಾಜಿ ಸೈನಿಕ ವಸಂತ ಬಡೆಕ್ಕರ ಮತ್ತು ಜ್ಞಾನೋದಯ ಬೆಥನಿ ಕಾಲೇಜಿನ ಉಪನ್ಯಾಸಕಿ ಮಮತಾ ಅವರ ಪುತ್ರ. ಜೆಫಿನ್ ಇವರು ಉದ್ಯಮಿ ಜಾನ್ಸನ್ ಜಾನ್ ಮತ್ತು ಸಿನಿ ಜಾನ್ಸನ್ ಪುಲಿಕಳ್ ಮನೆ, ನೆಲ್ಯಾಡಿ ಅವರ ಪುತ್ರ.

ಈ ಸಾಧನೆಗೆ ನೆಲ್ಯಾಡಿ ಹಾಗೂ ಸಂಪೂರ್ಣ ಕಡಬ ತಾಲೂಕು ಹೆಮ್ಮೆಪಡುತ್ತಿದೆ. ವಿದ್ಯಾರ್ಥಿಗಳಿಗೆ ಶಿಕ್ಷಕರು, ಪೋಷಕರು ಹಾಗೂ ಕಾಲೇಜು ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸುತ್ತಿದ್ದಾರೆ.

  •  

Leave a Reply

You May Have Missed

error: Content is protected !!