ಬಂಟ್ವಾಳ: ನಾಲ್ಕು ಮಂದಿಯ ತಂಡದಿಂದ ಮುಸ್ಲಿಂ ಯುವಕನಿಗೆ ಚೂರಿ ಇರಿತ

Bantwala

ಬಂಟ್ವಾಳ: ನಾಲ್ಕು ಮಂದಿಯ ತಂಡದಿಂದ ಮುಸ್ಲಿಂ ಯುವಕನಿಗೆ ಚೂರಿ ಇರಿತ

ಬಂಟ್ವಾಳ : ವ್ಯಕ್ತಿಯೋರ್ವರಿಗೆ ನಾಲ್ಕು ಮಂದಿಯ ತಂಡವೊಂದು ತಲವಾರು ದಾಳಿ ನಡೆಸಿ ಪರಾರಿಯಾದ ಘಟನೆ ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಬಸ್ಸು ನಿಲ್ದಾಣ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ.

ದಾಳಿಗೊಳಗಾದವರನ್ನು ಸ್ಥಳೀಯ ನಿವಾಸಿ, ಪೈಂಟರ್ ವೃತ್ತಿಯ ಹಮೀದ್ ಯಾನೆ ಅಮ್ಮಿ ಎಂದು ಹೆಸರಿಸಲಾಗಿದೆ. ಇರಿತದಿಂದ ಹಮೀದ್ ಅವರ ಕೈಗೆ ಆಳವಾದ ಗಂಭೀರ ಗಾಯವಾಗಿದ್ದು, ಅವರನ್ನು ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

  •  

Leave a Reply

You May Have Missed

error: Content is protected !!