ಹಿರಿಯ ಸಂಶೋಧಕ ಡಾ.ಎಸ್. ಡಿ. ಶೆಟ್ಟಿ ದಂಪತಿಗಳಿಗೆ ಶಿಶಿಲ ಶ್ರೀ ಕ್ಷೇತ್ರದಲ್ಲಿ ಗೌರವಾರ್ಪಣೆ

Shishila

ಹಿರಿಯ ಸಂಶೋಧಕ ಡಾ.ಎಸ್. ಡಿ. ಶೆಟ್ಟಿ ದಂಪತಿಗಳಿಗೆ ಶಿಶಿಲ ಶ್ರೀ ಕ್ಷೇತ್ರದಲ್ಲಿ ಗೌರವಾರ್ಪಣೆ

ಕೊಕ್ಕಡ: ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಕಾರ್ಯಕ್ರಮದ ಸಂದರ್ಭ, ಹಿರಿಯ ಸಂಶೋಧಕರು ಹಾಗೂ ಉಜಿರೆ ಹಾಮಾನಾ ಸಂಶೋಧನಾ ಕೇಂದ್ರ ನಿರ್ದೇಶಕರಾದ ಡಾ.ಎಸ್.ಡಿ.ಶೆಟ್ಟಿ ಮತ್ತು ಶ್ರೀಮತಿ ಸುಗುಣ ಶೆಟ್ಟಿ ದಂಪತಿಗಳಿಗೆ ಗೌರವಾರ್ಪಣೆ ನಡೆಯಿತು.

ಅವರ 50ನೇ ವಿವಾಹ ವಾರ್ಷಿಕೋತ್ಸವ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ, ಶ್ರೀ ಕ್ಷೇತ್ರ ಚಂದ್ರಪುರ ಆಡಳಿತ ಮಂಡಳಿಯ ಪರವಾಗಿ ಸಮಿತಿ ಸಂಚಾಲಕರಾದ ಡಾ.ಜಯಕೀರ್ತಿ ಜೈನ್ ಅವರ ನೇತೃತ್ವದಲ್ಲಿ ಶ್ರದ್ಧಾಪೂರ್ವಕ ಗೌರವ ಸಲ್ಲಿಸಲಾಯಿತು.

ಈ ಸಂದರ್ಭ ಶ್ರೀ ಕ್ಷೇತ್ರ ಉಪಾಧ್ಯಕ್ಷ ಜಿನರಾಜ ಪೂವಣಿ, ರಾಜ್ಯ ಸರ್ಕಾರಿ ಅಧಿಕಾರಿಗಳ ವಿಭಿನ್ನೋದ್ದೇಶ ಸಹಕಾರಿ ಸಂಘ ಕೊಕ್ಕಡ ಶಾಖೆಯ ಪ್ರಬಂಧಕರಾದ ಪಿ.ಅತೀಶಯ ಜೈನ್, ರಾಣಿ ಕಾಳಲಾ ದೇವಿ ಜೈನ್ ಮಹಿಳಾ ಸಮಾಜದ ಸದಸ್ಯೆ ಶ್ರೀಮತಿ ರಕ್ಷಾ, ಪುರೋಹಿತರಾದ ಅರಹಂತ ಇಂದ್ರ, ಜಿನೇಶ್ ಜೈನ್ ಹಾಗೂ ಇತರ ಭಕ್ತಾದಿಗಳು ಭಾಗವಹಿಸಿದ್ದರು.

ಶ್ರದ್ಧೆ, ಸಾಂಸ್ಕೃತಿಕ ಪರಂಪರೆ ಹಾಗೂ ಸಮಾಜಸೇವೆಗಾಗಿ ಶಿಶಿಲ ಶ್ರೀ ಕ್ಷೇತ್ರದಲ್ಲಿ ಈ ರೀತಿಯ ಗೌರವಾರ್ಪಣಾ ಕಾರ್ಯಕ್ರಮಗಳು ನಿರಂತರ ನಡೆಯುತ್ತಿರುವುದು ಶ್ಲಾಘನೀಯ ಎಂಬ ಮಾತುಗಳು ಹಬ್ಬದ ಸಂದರ್ಭದಲ್ಲಿ ಕೇಳಿಬಂದವು.

  •  

Leave a Reply

You May Have Missed

error: Content is protected !!