ಪುತ್ತೂರಿನ ಬಪ್ಪಳಿಗೆ ಬಿ. ಅಬ್ದುಲ್ ರಹಿಮಾನ್ ನಿಧನ


ಪುತ್ತೂರು: ಪುತ್ತೂರು ಕೇಂದ್ರ ಜುಮಾ ಮಸೀದಿ ಜಮಾಅತ್ ಗೆ ಒಳಪಟ್ಟ ಬಪ್ಪಳಿಗೆ ಮಸ್ಟಿದುನ್ನೂರು ಜುಮಾ ಮಸೀದಿಯ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರಾದ ಬನ್ನೂರು ನಿವಾಸಿ ಬಿ. ಅಬ್ದುಲ್ ರಹಿಮಾನ್ ಅವರು ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಮಂಗಳೂರಿನಲ್ಲಿ ನಿಧನರಾದರು.
ಅವರು ಪುತ್ತೂರು ಪುರಸಭೆಯ ಮಾಜಿ ಕೌನ್ಸಿಲರ್ ಆಗಿ ಹಾಗೂ ಸ್ಥಾಯೀ ಸಮಿತಿಯ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸಮುದಾಯದಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಅವರು ಸರಳ ಹಾಗೂ ಜನಸ್ನೇಹಿ ವ್ಯಕ್ತಿತ್ವಕ್ಕಾಗಿ ಪ್ರಸಿದ್ಧರಾಗಿದ್ದರು.
ಮೃತರಿಗೆ ಪುತ್ರನು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.




























Leave a Reply