ಕೆ ಎಸ್ ಆರ್ ಟಿ ಸಿ ಬಸ್‌ ನಿಯಂತ್ರಣ ತಪ್ಪಿ ಪಲ್ಟಿ

Subramanya

ಕೆ ಎಸ್ ಆರ್ ಟಿ ಸಿ ಬಸ್‌ ನಿಯಂತ್ರಣ ತಪ್ಪಿ ಪಲ್ಟಿ

ಸುಬ್ರಹ್ಮಣ್ಯ: ದಾವಣಗೆರೆಯಿ೦ದ ಸುಬ್ರಹ್ಮಣ್ಯಕ್ಕೆ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಮೇ.25 ರ ಮುಂಜಾನೆ ನಿಯ೦ತ್ರಣ ತಪ್ಪಿ ರಸ್ತೆ ಬದಿಗೆ ಬಿದ್ದ ಘಟನೆ ವರದಿಯಾಗಿದೆ.

ಬಿಳಿನೆಲೆಯ ಚೇರು ಎಂಬಲ್ಲಿ ಮುಂಜಾನೆ 4.30 ಕ್ಕೆ ಈ ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಸಂಭವಿಸಿರುವುದಾಗಿ ವರದಿಯಾಗಿದೆ. ಬಸ್ ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣ ಪುಟ್ಟಗಾಯವಾಗಿರುವುದಾಗಿ ವರದಿಯಾಗಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಸ್‌ ಸಂಪೂರ್ಣ ವಾಲಿದ ಸ್ಥಿತಿಯಲ್ಲಿ ನಿಂತಿದ್ದ ಕಾರಣ ಸಂಭಾವ್ಯ ಅಪಾಯ ತಪ್ಪಿದಂತಾಗಿದೆ. ನಿರಂತರ ಮಳೆ ಸುರಿಯುತ್ತಿದ್ದ ಕಾರಣ ವೇಗದಲ್ಲಿ ಬರುತ್ತಿದ್ದ ಬಸ್ ನಿಯಂತ್ರಣ ಕ್ಕೆ ಸಿಗದೆ ರಸ್ತೆ ಬಿಟ್ಟು ಚರಂಡಿಗೆ ಇಳಿದಿದೆ ಎ೦ದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

  •  

Leave a Reply

You May Have Missed

error: Content is protected !!