ಅಪಾರ್ಟ್ಮೆಂಟ್‌ನ 12ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು

Mangaluru

ಅಪಾರ್ಟ್ಮೆಂಟ್‌ನ 12ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು

ಮಂಗಳೂರು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಅಪಾರ್ಟ್ಮೆಂಟ್‌ನ 12ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರವಲಯದ ಕುತ್ತಾರಿನಲ್ಲಿ ನಡೆದಿದೆ.

ಕುತ್ತಾರು ನಿವಾಸಿ ಹಾಗೂ ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಯ ವೈದ್ಯ ಡಾ.ಮುಮ್ತಾಝ್ ಅಹಮ್ಮದ್ ದಂಪತಿಯ ಮಗಳು ಹಿಬಾ ಐಮನ್ (15) ಮೃತ ದುರ್ದೈವಿ.

ಕುತ್ತಾರಿನಲ್ಲಿರುವ 18 ಮಹಡಿಯ ಸಿಲಿಕೋನಿಯಾ ಅಪಾರ್ಟ್ಮೆಂಟ್‌ನ 12ನೇ ಮಹಡಿಯಿಂದ ಹಿಬಾ ಐಮನ್ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ. ಮಹಡಿಯಲ್ಲಿ ಬಟ್ಟೆ ಒಣ ಹಾಕುತ್ತಿದ್ದಾಗ ಘಟನೆ ನಡೆದಿದೆ ಎಂದು ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.

ಹಿಬಾ ಐಮನ್‌ಳ ತಂದೆ, ತಾಯಿ ಇಬ್ಬರೂ ದೇರಳಕಟ್ಟೆ ಯೇನಪೋಯ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು, ಹೆತ್ತವರು ಕರ್ತವ್ಯಕ್ಕೆ ತೆರಳಿದ್ದಾಗ ಅಪಾರ್ಟ್ಮೆಂಟ್‌ನಲ್ಲಿ ಈ ದುರ್ಘಟನೆ ನಡೆದಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  •  
Previous post

ಪಟ್ಲಡ್ಕ : ಸ್ವಾಮಿ ಕೊರಗಜ್ಜ ದೈವಗಳ ದೇವಸ್ಥಾನಕ್ಕೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ

Next post

ನೆಲ್ಯಾಡಿ: ಬಿಲ್ಲವ ಗ್ರಾಮ ಸಮಿತಿ, ಬಿಲ್ಲವ ಮಹಿಳಾ ವೇದಿಕೆ ವಾರ್ಷಿಕ ಮಹಾಸಭೆ – ಉಚಿತ ಪುಸ್ತಕ ವಿತರಣೆ | ಪ್ರತಿಭಾ ಪುರಸ್ಕಾರ

Leave a Reply

You May Have Missed

error: Content is protected !!