ಅಂತರ್ ಜಿಲ್ಲಾ ಮಟ್ಟದ ಸೆಂಟ್ ಮೇರಿಸ್ ಟ್ರೋಫಿ ಶಟಲ್ ಬಾಡ್ಮಿಂಟನ್ ಪಂದ್ಯಾಟ

Nellyadi

ಅಂತರ್ ಜಿಲ್ಲಾ ಮಟ್ಟದ ಸೆಂಟ್ ಮೇರಿಸ್ ಟ್ರೋಫಿ ಶಟಲ್ ಬಾಡ್ಮಿಂಟನ್ ಪಂದ್ಯಾಟ

ನೆಲ್ಯಾಡಿ: ಸಂತ ಮೇರಿಸ್ ಟ್ರೋಫಿ ಅಂತರ್ ಜಿಲ್ಲಾ ಮಟ್ಟದ ಶಟಲ್ ಬಾಡ್ಮಿಂಟನ್ ಪಂದ್ಯಾಟವು ಆರ್ಲ ಸೆಂಟ್ ಮೇರಿಸ್ ಚರ್ಚ್ ನ ಯುವ ಘಟಕ ಸೀರೋ ಮಲಬಾರ್ ಯೂತ್ ಮೂವ್ ಮೆಂಟ್ ಇದರ ನೇತೃತ್ವದಲ್ಲಿ ನೆಲ್ಯಾಡಿಯ ಎಲೈಟ್ ಇಂಡೋರ್ ಕೋರ್ಟ್ ನಲ್ಲಿ ನಡೆಯಿತು.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವಿವಿಧ ಭಾಗಗಳಿಂದ 30ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು, ಕಠಿಣ ಪೈಪೋಟಿ ನಡುವೆ ಕುಲಶೇಖರ ಕೊರ್ಡಲ್ ಚರ್ಚ್‌ನ ಆಟಗಾರರಾದ ಆರುಷ್ ಹಾಗೂ ಸೂರಜ್ ಜೋಡಿ ಪ್ರಥಮ ಸ್ಥಾನವನ್ನು, ನೆಲ್ಯಾಡಿಯ ಲಿಜೋ – ಜೆಸ್ವಿನ್ ತಂಡ ದ್ವಿತೀಯ ಸ್ಥಾನವನ್ನು, ಬಜಗೋಳಿಯ ಅನೂಪ್ – ಬಿಬಿನ್ ತಂಡ ತೃತೀಯ ಸ್ಥಾನವನ್ನು, ತೋಟತ್ತಾಡಿಯ ರೋಬಿನ್ – ಟಿನೋಶ್ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ನೆಲ್ಯಾಡಿ ಚರ್ಚ್‌ನ ಧರ್ಮಗುರುಗಳಾದ ವಂ.ಫಾ.ಶಾಜಿ ಮಾತ್ಯು ಹಾಗೂ ಫಾ.ಅಲೆಕ್ಸ್ ಉಪಸ್ಥಿತರಿದ್ದರು. ಜೊತೆಗೆ ಯುವ ಮುಖಂಡರಾದ ಶ್ರೀಜಿತ್, ಶಾರೋನ್, ಜಿನು ಡಿವಿನ್, ಜಿತು, ಅಜಿತ್, ಪ್ರಥ್ವಿನ್ ಮತ್ತು ಟ್ರಸ್ಟಿಗಳು ಹೃದಿತ್, ಜೈಸನ್, ಜೋಸ್ಟಿನ್‌ ಉಪಸ್ಥಿತರಿದ್ದರು.

  •  

Leave a Reply

You May Have Missed

error: Content is protected !!