ನೆಲ್ಯಾಡಿ ಜ್ಞಾನೋದಯ ಬೆಥನಿ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

Nellyadi

ನೆಲ್ಯಾಡಿ ಜ್ಞಾನೋದಯ ಬೆಥನಿ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

ನೆಲ್ಯಾಡಿ: ನೆಲ್ಯಾಡಿ ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ಜರುಗಿದ್ದು, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವಿಕಾಸ ಹಾಗೂ ಉಜ್ವಲ ಭವಿಷ್ಯದತ್ತ ಸ್ಪಷ್ಟ ಗುರಿಯನ್ನು ರೂಪಿಸಿಕೊಳ್ಳುವ ಬಗ್ಗೆ ಪ್ರೇರಣೆ ನೀಡುವ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಉಪ್ಪಿನಂಗಡಿಯ ಪ್ರೊಫೆಷನರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಸ್ತ ಶೆಟ್ಟಿ ಮಾತನಾಡುತ್ತಾ, “ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿಯಿಂದ ಮುಂದಾಗಬೇಕು. ನಾಯಕತ್ವವೆಂದರೆ ಕೇವಲ ಅಧಿಕಾರವಲ್ಲ, ಅದಕ್ಕೆ ಜವಾಬ್ದಾರಿಯೂ ಸೇರಿದೆ. ನೈತಿಕ ಗುಣಗಳೊಂದಿಗೆ ಸಂಸ್ಥೆಯ ಸ್ವಚ್ಛತೆ ಮತ್ತು ಶಿಸ್ತಿನತ್ತ ಗಮನ ನೀಡುವುದು ಅಗತ್ಯ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕ ರೆ.ಫಾ.ಜೈಸನ್ ಸೈಮನ್ ವಹಿಸಿದ್ದರು. ಕಾಲೇಜು ಪ್ರಾಚಾರ್ಯ ರೆ.ಫಾ.ವರ್ಗೀಸ್ ಕೈಪನಡ್ಕ ವಿದ್ಯಾರ್ಥಿ ಸಂಘದ ಮಹತ್ವವನ್ನು ವಿವರಿಸಿ, “ಇದು ವಿದ್ಯಾರ್ಥಿಗಳಿಗೆ ಅನುಭವದ ಶಾಲೆಯಾಗಿದೆ. ನಾಯಕತ್ವ ಬುದ್ಧಿಯನ್ನು ಬೆಳೆಸಿಕೊಳ್ಳಲು ಇದು ಉತ್ತಮ ವೇದಿಕೆ” ಎಂದು ಹೇಳಿದರು. ಅವರು ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.

ಕಾರ್ಯಕ್ರಮದಲ್ಲಿ ಉಪಪ್ರಾಚಾರ್ಯ ಜೋಸ್ ಎಂ.ಜೆ, ಮುಖ್ಯಶಿಕ್ಷಕ ಜಾರ್ಜ್ ಕೆ. ತೋಮಸ್, ವಿದ್ಯಾರ್ಥಿ ಸಂಘದ ಮುಖ್ಯಮಂತ್ರಿ ಜೋಯೆಲ್ ಎಂ.ಜೆ, ಗೃಹಮಂತ್ರಿ ಮೋಕ್ಷಿತಾ ಎಸ್ ರೈ, ಕ್ರೀಡಾಮಂತ್ರಿ ಪ್ರೀತಂ ಪಿ.ಸಿ, ಆರೋಗ್ಯಮಂತ್ರಿ ಶೇರಿನ್ ಸುನಿಲ್, ಪಾರ್ಲಿಮೆಂಟ್ ಮಂತ್ರಿ ಆಲ್ಬನ್ ಸಿ.ವಿ, ಶಿಕ್ಷಣಮಂತ್ರಿ ಮರಿಯಾ ಜೋಸೆಫ್, ನೀರಾವರಿಮಂತ್ರಿ ಆಲ್ಬನ್ ಜಾರ್ಜ್, ಸಾಂಸ್ಕೃತಿಕ ಮಂತ್ರಿ ಜೆಸ್ನ ಕೆ.ಜೆ, ಸಂವಹನಮಂತ್ರಿ ಎಲಿಜಾ ತೋಮ್ ಉಪಸ್ಥಿತರಿದ್ದರು.

ಮುಖ್ಯಶಿಕ್ಷಕ ಜಾರ್ಜ್ ಕೆ ತೋಮಸ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಲಾಲಿತ್ಯ ಮತ್ತು ಸಾತ್ವಿಕ ಕಾರ್ಯಕ್ರಮ ನಿರೂಪಿಸಿದರು. ಜೋಯೆಲ್ ಎಂ.ಜೆ ವಂದಿಸಿದರು.

  •  

Leave a Reply

You May Have Missed

error: Content is protected !!