ಸೌತಡ್ಕ: ಕೆಮ್ ಟ್ರೆಂಡ್ ಕಂಪೆನಿಯಿಂದ ಸೇವಾಧಾಮಕ್ಕೆ ಅನುದಾನ

Sowthadka

ಸೌತಡ್ಕ: ಕೆಮ್ ಟ್ರೆಂಡ್ ಕಂಪೆನಿಯಿಂದ ಸೇವಾಧಾಮಕ್ಕೆ ಅನುದಾನ

ಸೌತಡ್ಕ: ಬೆಂಗಳೂರಿನ ಖ್ಯಾತ ಕೈಗಾರಿಕಾ ಕಂಪೆನಿ ಕೆಮ್ ಟ್ರೆಂಡ್ ನ ಸಿಇಒ ರಾಜೇಶ್ ಫಡ್ಕೆ, ಇಂಡಸ್ಟ್ರಿ ಡೆವಲಪ್ಮೆಂಟ್ ಮತ್ತು ಸೇಲ್ಸ್ ಮ್ಯಾನೇಜರ್‌ಗಳು ರೋಮಿನ್ ಬೋಸ್ ಮತ್ತು ರಾಮರಾವ್ ಕುಮಾರ್ ಅವರು ಜೂ.18ರಂದು ದಕ್ಷಿಣ ಕನ್ನಡದ ಸೌತಡ್ಕ ಮತ್ತು ಕನ್ಯಾಡಿ ಕ್ಷೇತ್ರಗಳಿಗೆ ಭೇಟಿ ನೀಡಿ ಮಾನವೀಯ ಸ್ಪಂದನೆ ಮೆರೆದಿದ್ದಾರೆ.

ಸೌತಡ್ಕ, ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರ ಸೇವಾಧಾಮಕ್ಕೆ ಹಾಗೂ ಕನ್ಯಾಡಿಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ಪುನಶ್ಚೇತನ ಕೇಂದ್ರ ಸೇವಾನಿಕೇತನ ಅನ್ನು ಅವರು ವೀಕ್ಷಿಸಿದರು. ಸಂಸ್ಥೆಯ ಸಿಎಸ್ಆರ್ (ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ) ಅನುದಾನ ಪತ್ರವನ್ನು ಹಸ್ತಾಂತರಿಸಿ, ಕೇಂದ್ರದ ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿ ಎಂಬ ಹಾರೈಕೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೊಕ್ಕಡ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀಕೃಷ್ಣ ಭಟ್, ಸಂಸ್ಥೆಯ ಸ್ಥಾಪಕ ಕೆ.ವಿನಾಯಕ ರಾವ್, ಅಪಘಾತಕ್ಕೊಳಗಾದ ದಿವ್ಯಾಂಗರು, ಆರೈಕೆದಾರರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  •  

Leave a Reply

You May Have Missed

error: Content is protected !!