ಶಿಬಾಜೆ ಅಂಗನವಾಡಿ ಕೇಂದ್ರದಲ್ಲಿ ಎಲ್ ಕೆ ಜಿ, ಯು ಕೆ ಜಿ ನೂತನ ತರಗತಿ ಶುಭಾರಂಭ

Shibaje

ಶಿಬಾಜೆ ಅಂಗನವಾಡಿ ಕೇಂದ್ರದಲ್ಲಿ ಎಲ್ ಕೆ ಜಿ, ಯು ಕೆ ಜಿ ನೂತನ ತರಗತಿ ಶುಭಾರಂಭ

ಕೊಕ್ಕಡ: ಶಿಬಾಜೆ ಅಂಗನವಾಡಿ ಕೇಂದ್ರದಲ್ಲಿ ಮೊದಲ ಬಾರಿಗೆ ಎಲ್.ಕೆ.ಜಿ, ಯು.ಕೆ.ಜಿ ತರಗತಿ ಸೋಮವಾರದಂದು ಶುಭಾರಂಭಗೊಂಡಿತು.

ಉದ್ಘಾಟನೆಯನ್ನು ಹತ್ಯಡ್ಕ ಸಿ.ಎ. ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ ನಾಯಕ್ ನೆರವೇರಿಸಿ ಅವರು ಮಕ್ಕಳಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿ, “ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಅಡಿಪಾಯ ಒದಗಿಸುವುದರಲ್ಲಿ ಇಂತಹ ಪಠ್ಯಕ್ರಮಗಳು ಮಹತ್ವದ ಪಾತ್ರವಹಿಸುತ್ತವೆ” ಎಂದು ಹೇಳಿದರು.

ಗ್ರಾ.ಪಂ. ಅಧ್ಯಕ್ಷೆ ರತ್ನ, ಉಪಾಧ್ಯಕ್ಷ ದಿನಕರ್ ಕುರುಪ್, ಸದಸ್ಯರಾದ ರತೀಶ್ ಬಿ, ವಿನಯಚಂದ್ರ ಟಿ, ವನಿತಾ ವಿ ಶೆಟ್ಟಿಗಾರ್, ಬಾಲವಿಕಾಸ ಸಮಿತಿ ಅಧ್ಯಕ್ಷೆ ಇಂದಿರಾ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಕೊಕ್ಕಡ ವಿಭಾಗದ ಮೇಲ್ವಿಚಾರಕಿ ಅನ್ನಪೂರ್ಣ, ಹಿರಿಯ ನಾಗರಿಕರಾದ ಕೃಷ್ಣಪ್ಪ ಬಿ ಮತ್ತು ಪುರಂದರ ರಾವ್ ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಅಜಿತಾ ಸ್ವಾಗತಿಸಿ, ವಂದಿಸಿದರು.

  •  

Leave a Reply

You May Have Missed

error: Content is protected !!