ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಗೆ ಇನ್‌ಸ್ಟಯರ್ ಅವಾರ್ಡ್

Nellyadi

ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಗೆ ಇನ್‌ಸ್ಟಯರ್ ಅವಾರ್ಡ್

ನೆಲ್ಯಾಡಿ ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಾದ ಪೂರ್ವಿ ಎಸ್.ಎನ್ ಮತ್ತು ಅಲನ್ ವಿ ಲಾರೆನ್ಸ್ ಇವರು 2024–25ನೇ ಸಾಲಿನ ಇನ್‌ಸ್ಟಯರ್ ಅವಾರ್ಡ್ ಮನಾಕ್‌ ಜಿಲ್ಲಾ ಮಟ್ಟದ ಆಯ್ಕೆಯಾಗಿದ್ದಾರೆ.

ಪೂರ್ವಿ ಎಸ್.ಎನ್. ‘ನೈಸರ್ಗಿಕ ಕಾಡಿಗೆ’ ಎಂಬ ಯೋಜನೆಯೊಂದಿಗೆ ಹಾಗೂ ಅಲನ್ ವಿ ಲಾರೆನ್ಸ್ ‘ಫಾರ್ಮ್ ಸೆಕ್ಯುರಿಟಿ ಸಿಸ್ಟಮ್’ ಎಂಬ ವಿಜ್ಞಾನ ಯೋಜನೆಯೊಂದಿಗೆ ಈ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ವಿಜ್ಞಾನ ಶಿಕ್ಷಕಿ ಪ್ರಣವಿ ಬಿ ಹಾಗೂ ಕೃತಕ ಬುದ್ಧಿಮತ್ತೆ ವಿಭಾಗದ ಮುಖ್ಯಸ್ಥರಾದ ಅಭಿಷೇಕ್ ಬೆಂಜಮಿನ್ ಮಾರ್ಗದರ್ಶನ ನೀಡಿದ್ದಾರೆ.

ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಫಾ.ಡಾ. ವರ್ಗೀಸ್ ಕೈಪನಡ್ಕ ಒ.ಐ.ಸಿ ಹಾಗೂ ಸಂಚಾಲಕರಾದ ಜೈಸನ್ ಸೈಮನ್ ಒ.ಐ.ಸಿ ಇವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದಾರೆ.

  •  
Previous post

ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯಕ್ಕೆ ಭೇಟಿ

Next post

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಅಧ್ಯಕ್ಷರ ಭೇಟಿ

Leave a Reply

You May Have Missed

error: Content is protected !!