Puttur: ಸಹಪಾಠಿಯಿಂದಲೇ ದೈಹಿಕ ಸಂಪರ್ಕ: ವಿದ್ಯಾರ್ಥಿನಿ ಗರ್ಭಿಣಿ; ಮದುವೆಗೆ ನಿರಾಕರಣೆ

Puttur

Puttur: ಸಹಪಾಠಿಯಿಂದಲೇ ದೈಹಿಕ ಸಂಪರ್ಕ: ವಿದ್ಯಾರ್ಥಿನಿ ಗರ್ಭಿಣಿ; ಮದುವೆಗೆ ನಿರಾಕರಣೆ

ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಆಕೆ ಗರ್ಭವತಿಯಾದ ಬಳಿಕ ವಿವಾಹವಾಗಲು ನಿರಾಕರಿಸಿದ ಆರೋಪದ ಮೇಲೆ ಸಹಪಾಠಿಯ ವಿರುದ್ಧ ಮಹಿಳಾ ಠಾಣೆಯಲ್ಲಿ ಅತ್ಯಾಚಾರ ಮತ್ತು ನಂಬಿಕೆ ದ್ರೋಹದ ಪ್ರಕರಣ ದಾಖಲಾಗಿದೆ.

ಬಪ್ಪಳಿಗೆ ನಿವಾಸಿ ಕೃಷ್ಣ ರಾವ್‌ (21).ಆರೋಪಿ ಯುವಕ. ಪ್ರಕರಣ ದಾಖಲಾಗುತ್ತದೆ ಆರೋಪಿ ತಲೆಮರಿಸಿಕೊಂಡಿದ್ದಾನೆ. ಸಂತ್ರಸ್ತೆ(21) ಕೂಡ ಪುತ್ತೂರು ನಿವಾಸಿಯಾಗಿದ್ದು, ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಸಂತ್ರಸ್ತ ಯುವತಿಯು ನೀಡಿದ ದೂರಿನಂತೆ, 2024 ಅ. 11 ರಂದು ಆರೋಪಿ ಕೃಷ್ಣ ರಾವ್ ಸಂತ್ರಸ್ತೆಯನ್ನು ನನ್ನ ಮನೆಗೆ ಕರೆಸಿಕೊಂಡು ಬಲವಂತದಿಂದ ದೈಹಿಕ ಸಂಪರ್ಕ ಮಾಡಿದ್ದಾನೆ. ಕೆಲವು ತಿಂಗಳ ಆನಂತರ ಸಂತ್ರಸ್ತೆ ಗರ್ಭಿಣಿಯಾದ ಬಳಿಕ ಈ ವಿಚಾರವನ್ನು ಆರೋಪಿ ಕೃಷ್ಣ ರಾವ್ ನಲ್ಲಿ ತಿಳಿಸಿದ್ದಾಳೆ. ಈ ವೇಳೆ ಮನೆ ಮಂದಿ ಬಳಿ ಈ ವಿಚಾರ ಹೇಳದಿದ್ದರೆ ನಾನು ನಿನ್ನನ್ನು ಮದುವೆಯಾಗುವುದಾಗಿ ಆರೋಪಿ ಒಪ್ಪಿಸಿದ್ದ. ಈಗ ಯುವತಿ 9 ತಿಂಗಳ ಗರ್ಭಿಣಿಯಾಗಿದ್ದು, ಆರೋಪಿ ಮದುವೆಯಾಗಲು ನಿರಾಕರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ದೂರಿನಲ್ಲಿ ಕೋರಿದ್ದಾಳೆ.

  •  

Leave a Reply

You May Have Missed

error: Content is protected !!