ಪಟ್ರಮೆ: ಗಾಳಿ, ಮಳೆಗೆ ಮನೆಯ ಮೇಲೆ ಬಿದ್ದ ಮರ; ಮನೆ ಹಾನಿ

Kokkada

ಪಟ್ರಮೆ: ಗಾಳಿ, ಮಳೆಗೆ ಮನೆಯ ಮೇಲೆ ಬಿದ್ದ ಮರ; ಮನೆ ಹಾನಿ

ಕೊಕ್ಕಡ: ಪಟ್ರಮೆಯ ಪಂಜುರ್ಲಿಕೋಡಿ ಪ್ರದೇಶದಲ್ಲಿ ಭಾರೀ ಗಾಳಿ ಮಳೆಯ ಪರಿಣಾಮವಾಗಿ ಮಾಯಿಲ ಮುಗೇರ ಎಂಬವರ ಮನೆಗೆ ಭಾರೀ ಹಾನಿ ಸಂಭವಿಸಿದೆ.

ಮನೆಯ ಪಕ್ಕದಲ್ಲಿದ್ದ ಮರವೊಂದು ಮನೆ ಮೇಲೆ ಬಿದ್ದು ಮನೆಗೆ ತೀವ್ರ ಹಾನಿಯಾಗಿದ್ದು, ಹಂಚುಗಳು ಒಡೆದು ಹೋಗಿವೆ. ಗಾಳಿಯೊಂದಿಗೆ ಸುರಿದ ಭಾರೀ ಮಳೆಯ ನೀರು ಹಾನಿಗೊಳಗಾದ ಹಂಚುಗಳ ಮುಖಾಂತರ ಮನೆಯೊಳಗೆ ನುಗ್ಗಿದೆ.

ಘಟನೆಯ ಸಮಯದಲ್ಲಿ ಮನೆಯವರು ಒಳಗೆಯೇ ಇದ್ದರೂ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ತಕ್ಷಣದ ಪರಿಹಾರಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಸಮೀಕ್ಷೆ ನಡೆಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

  •  

Leave a Reply

You May Have Missed

error: Content is protected !!