ಶಿಶಿಲೇಶ್ವರ ದೇವಾಲಯ ಜಲಾವೃತ: ತಹಶೀಲ್ದಾರರಿಂದ ಸ್ಥಳ ಪರಿಶೀಲನೆ

Shishila

ಶಿಶಿಲೇಶ್ವರ ದೇವಾಲಯ ಜಲಾವೃತ: ತಹಶೀಲ್ದಾರರಿಂದ ಸ್ಥಳ ಪರಿಶೀಲನೆ

ಶಿಶಿಲ: ಮಳೆಗಾಲದ ಅಬ್ಬರಕ್ಕೆ ಶಿಶಿಲ ಗ್ರಾಮದಲ್ಲಿ ಭಾರೀ ಹಾನಿಯುಂಟಾಗಿದ್ದು, ಶಶಿಲೇಶ್ವರ ದೇವಾಲಯದ ಪಕ್ಕದ ಪ್ರದೇಶಗಳಲ್ಲಿ ಬುಧವಾರದಂದು ಪ್ರವಾಹ ಉಂಟಾಗಿ ದೇವಾಲಯ ಸಂಪೂರ್ಣವಾಗಿ ಜಲಾವೃತಗೊಂಡಿರುವ ಘಟನೆ ನಡೆದಿತ್ತು.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರರಾದ ಪೃಥ್ವಿ ಸಾನಿಕಂ ಅವರು ಗುರುವಾರದಂದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಪಾವಡಪ್ಪ ದೊಡ್ಡಮನಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಧೀನ್ ಡಿ, ಉಪಾಧ್ಯಕ್ಷ ಯಶೋಧರ ಕೆ.ವಿ., ಪಂ.ಅ. ಅಧಿಕಾರಿ ದಿನೇಶ್ ಎಂ., ಗ್ರಾಮ ಆಡಳಿತ ಅಧಿಕಾರಿ ಶಿವಕುಮಾರ್ ಎ.ಎನ್ ಹಾಗೂ ಗ್ರಾಮ ಸಹಾಯಕ ವೀರಪ್ಪ ಗೌಡ ಉಪಸ್ಥಿತರಿದ್ದರು.

ಭಾರೀ ಮಳೆಯ ಕಾರಣದಿಂದ ಕಪಿಲಾ ನದಿಯಲ್ಲಿ ಉಕ್ಕಿ ಹರಿದ ನೀರು ದೇವಾಲಯದ ಆವರಣ ಪ್ರವೇಶಿಸಿ ಗರ್ಭಗುಡಿ ವರೆಗೆ ನುಗ್ಗಿದ್ದು. ಅಧಿಕಾರಿಗಳು ಪ್ರವಾಹದಿಂದ ಉಂಟಾದ ಹಾನಿಯ ಅಂದಾಜು ಹಾಗೂ ಪರಿಹಾರ ಕಾರ್ಯಗಳ ಕುರಿತಂತೆ ಪರಿಶೀಲನೆ ನಡೆಸಿದ್ದು, ಸತತ ಮಳೆಯ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

  •  

Leave a Reply

You May Have Missed

error: Content is protected !!