ಪಟ್ರಮೆ: ‘ಯಕ್ಷದ್ರುವ’ ಟ್ರಸ್ಟ್‌ನಿಂದ 2ನೇ ವರ್ಷದ ಯಕ್ಷನಾಟ್ಯ ತರಗತಿ ಉದ್ಘಾಟನೆ

Pattrame

ಪಟ್ರಮೆ: ‘ಯಕ್ಷದ್ರುವ’ ಟ್ರಸ್ಟ್‌ನಿಂದ 2ನೇ ವರ್ಷದ ಯಕ್ಷನಾಟ್ಯ ತರಗತಿ ಉದ್ಘಾಟನೆ

ಪಟ್ರಮೆ: ಪಟ್ಲ ಫೌಂಡೇಶನ್‌ನ “ಯಕ್ಷದ್ರುವ” ಯೋಜನೆಯಡಿಯಲ್ಲಿ, ಪಟ್ರಮೆಯ ಅನಾರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 2ನೇ ಸಾಲಿನ ಯಕ್ಷಗಾನ ನಾಟ್ಯ ತರಬೇತಿ ಶುಭಾರಂಭಗೊಂಡಿತು.

ಹಿರಿಯ ಯಕ್ಷಗಾನ ಕಲಾವಿದ ನಿರಂಜನ್ ಜೈನ್ ಉದ್ಘಾಟಿಸಿದರು. ಅವರು ಮಾತನಾಡುತ್ತಾ, “ಹಳ್ಳಿಯ ಮಕ್ಕಳಿಗೆ ಉಚಿತವಾಗಿ ಕಲೆಯನ್ನು ಪಾಠಿಸುವ ಕೆಲಸ ಮಾಡುತ್ತಿರುವ ಪಟ್ಲ ಫೌಂಡೇಶನ್‌ ಶ್ಲಾಘನೀಯ. ಈ ಅವಕಾಶವನ್ನು ಮಕ್ಕಳೂ, ಪೋಷಕರೂ ಸಂಪೂರ್ಣವಾಗಿ ಬಳಸಿಕೊಳ್ಳಬೇಕು” ಎಂದು ಹೇಳಿದರು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಧನಂಜಯ ಗೌಡರ ಅಧ್ಯಕ್ಷತೆಯಲ್ಲಿ ನಡೆಯಿತು. ‘ಯಕ್ಷದ್ರುವ’ ಟ್ರಸ್ಟ್ ಬೆಳ್ತಂಗಡಿ ಘಟಕದ ಪದಾಧಿಕಾರಿಗಳು, ಹಿರಿಯ ಕಲಾವಿದ ಚಂದ್ರಶೇಖರ ಗೌಡ, ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ಶ್ಯಾಮರಾಜ್, ನಾಟ್ಯಗುರು ಅರುಣ್ ಕುಮಾರ್, ಶಾಲಾಶಿಕ್ಷಕ ಕೃಷ್ಣಮೂರ್ತಿ ಹಾಗೂ ಶಾಲಾ ಸಮಿತಿ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.

ಸುಮಾರು 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಲಾಭ ಪಡೆಯಲಿದ್ದಾರೆ. ಸಹಶಿಕ್ಷಕ ಪ್ರಕಾಶ್ ಸ್ವಾಗತಿಸಿದರು, ಶಿಕ್ಷಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು, ಸಹಶಿಕ್ಷಕ ಜಯಂತ್ ವಂದಿಸಿದರು.

  •  

Leave a Reply

You May Have Missed

error: Content is protected !!