Nellyadi: ಪುತ್ತಿಗೆ ಸರ್ಕಾರಿ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ



ನೆಲ್ಯಾಡಿ: ಪುತ್ತಿಗೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ವಲಯದ ಯೋಜನಾಧಿಕಾರಿ ಪ್ರಕಾಶ್ ಅವರು ಉದ್ಘಾಟಿಸಿ, ಮಾತನಾಡಿದರು. “ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಶುದ್ಧ ನೀರಿನ ಬಳಕೆ ಅತ್ಯಂತ ಅಗತ್ಯ. ಯೋಜನೆಯ ಮೂಲಕ ಹಲವು ಕಲ್ಯಾಣ ಯೋಜನೆಗಳು ಮಕ್ಕಳಿಗೆ ಲಭಿಸುತ್ತಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾಗಿದೆ” ಎಂದು ಅವರು ಸಲಹೆ ನೀಡಿದರು. ಅಲ್ಲದೆ, ಗ್ರಾಮಸ್ಥರು ಮತ್ತು ಪಾಲಕರು ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಕೈಜೋಡಿಸಿ, ಮಕ್ಕಳ ಭವಿಷ್ಯಕ್ಕೆ ಮಾರ್ಗಹೊಂದಿಸುವ ಕೆಲಸ ಮಾಡಬೇಕೆಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ನೆಲ್ಯಾಡಿ ಕ್ಲಸ್ಟರ್ನ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಬಾಕಿಲ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸೂರಪ್ಪ ಗೌಡ ಕಣಿಯ ಮತ್ತು ಸದಸ್ಯರು, ಪುತ್ತಿಗೆ ಒಕ್ಕೂಟದ ಅಧ್ಯಕ್ಷ ಲೋಕಯ್ಯ ಗೌಡ ನೆಕ್ಕಾಜೆ, ಶಾಲಾ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುದೇಶ್ ಜೈನ್, ಊರ ಹಿರಿಯರಾದ ಕೇಶವ ಗೌಡ ಪರಾರಿ ಉಪಸ್ಥಿತರಿದ್ದರು.
ಶಿಕ್ಷಕಿ ಜಯಶ್ರೀ ಸ್ವಾಗತಿಸಿದರು, ಮುಖ್ಯಶಿಕ್ಷಕ ಮಧುಸೂದನ ಕೆ.ಎ. ಕಾರ್ಯಕ್ರಮ ನಿರೂಪಿಸಿದರು. ನಯನಕುಮಾರಿ ವಂದನೆಯನ್ನು ಸಲ್ಲಿಸಿದರು.
























Leave a Reply