Nellyadi: ಉದನೆ ವಲಯ ಮಾತೃ ವೇದಿಕೆ ಸಭೆ : 2025-28 ರ ನೂತನ ಪದಾಧಿಕಾರಿಗಳ ಆಯ್ಕೆ

Nellyadi

Nellyadi: ಉದನೆ ವಲಯ ಮಾತೃ ವೇದಿಕೆ ಸಭೆ : 2025-28 ರ ನೂತನ ಪದಾಧಿಕಾರಿಗಳ ಆಯ್ಕೆ

ನೆಲ್ಯಾಡಿ : ಬೆಳ್ತಂಗಡಿ ಧರ್ಮಪ್ರಾಂತ್ಯದ ಮಹಿಳಾ ಸಂಘ ಧರ್ಮಪ್ರಾಂತಿಯ ಮಾತೃ ವೇದಿಕೆ ಅಂಗವಾಗಿ ಉದನೆ ವಲಯ ಮಟ್ಟದ ಪದಾಧಿಕಾರಿಗಳ ಸಭೆ ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ಅಲ್ಫೋನ್ಸ ಸಭಾಂಗಣದಲ್ಲಿ ಸಂಭ್ರಮದಿಂದ ನಡೆಯಿತು. ಸಭೆಯಲ್ಲಿ 2025ರಿಂದ 2028ನೇ ಸಾಲಿನ ಹೊಸ ಪದಾಧಿಕಾರಿಗಳ ಆಯ್ಕೆಯು ನಡೆಯಿತು.

ಈಗಾಗಲೇ ಸಂಘದ ವಿವಿಧ ಯುನಿಟ್‌ಗಳಲ್ಲಿ ಸಕ್ರೀಯವಾಗಿ ಸೇವೆ ಸಲ್ಲಿಸುತ್ತಿದ್ದ ಮಹಿಳೆಯರು ಈ ಬಾರಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಲು ಆಯ್ಕೆಯಾದರು. ಉದನೆ ವಲಯದ ಅಧ್ಯಕ್ಷೆಯಾಗಿ ಅಡ್ಡಹೊಳೆ ಸೆಂಟ್ ಜೋಸೆಫ್ ಯುನಿಟ್‌ನ ರೇಖಾ ಆಗಸ್ಟಿನ್, ಉಪಾಧ್ಯಕ್ಷೆಯಾಗಿ ಮಿನಿ ಪ್ರಕಾಶ್ ಶಿರಾಡಿ, ಕಾರ್ಯದರ್ಶಿಯಾಗಿ ಅನುಷಾ ಎಂ.ಕೆ ನೆಲ್ಯಾಡಿ, ಜೊತೆ ಕಾರ್ಯದರ್ಶಿಯಾಗಿ ರಿಯಾ ಅನೀಶ್ ಆರ್ಲ ಮತ್ತು ಕೋಶಾಧಿಕಾರಿಯಾಗಿ ಸ್ವೀಟಿ ಸಣ್ಣಿ ಉದನೆ ಇವರು ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ನೆಲ್ಯಾಡಿ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಂ.ಫಾ. ಶಾಜಿ ಮಾತ್ಯು ಹಾಗೂ ಉದನೆ ವಂ.ಫಾ.ಸಿಬಿ ತೋಮಸ್ ಅವರು ಶ್ರದ್ಧಾ ಹಾಗೂ ಸಾಮಾಜಿಕ ಸೇವೆಯ ಕುರಿತಂತೆ ಅರಿವು ಮೂಡಿಸುವಂತೆ ಮಾತನಾಡಿದರು. ಧರ್ಮಪ್ರಾಂತಿಯ ಕಾರ್ಯದರ್ಶಿ ಜೆಸ್ಸಿ ಕೆ.ಜೆ ಹಾಗೂ ಆನಿಮೇಟರ್ ಸಿಸ್ಟರ್ ಲಿಸ್ ಮಾತ್ಯು ಅವರು ಉಪಸ್ಥಿತರಿದ್ದರು. ಸುಜಾ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು.

  •  

Leave a Reply

You May Have Missed

error: Content is protected !!