ನೆಲ್ಯಾಡಿ ಬೆಥನಿ ಐಟಿಐ ಯಲ್ಲಿ ವೃತ್ತಿ ಪ್ರಮಾಣ ಪತ್ರ ವಿತರಣಾ ಸಮಾರಂಭ

ITI

ನೆಲ್ಯಾಡಿ ಬೆಥನಿ ಐಟಿಐ ಯಲ್ಲಿ ವೃತ್ತಿ ಪ್ರಮಾಣ ಪತ್ರ ವಿತರಣಾ ಸಮಾರಂಭ

ನೆಲ್ಯಾಡಿ: ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ)ಯಲ್ಲಿ 2023–25ನೇ ಸಾಲಿನ ವೃತ್ತಿ ಪ್ರಮಾಣ ಪತ್ರ ವಿತರಣಾ ಸಮಾರಂಭ ಗುರುವಾರ ವಿಜೃಂಭಣೆಯಿಂದ ನೆರವೇರಿತು.

ಮುಖ್ಯ ಅತಿಥಿಯಾಗಿ ಸಂಸ್ಥೆಯ ಸಂಚಾಲಕ ಫಾ.ವರ್ಗೀಸ್ ಕೈಪನಡ್ಕ ಮಾತನಾಡಿ ಸತತ ಪ್ರಯತ್ನ, ಗುರಿಯ ಕಡೆಗೆ ಕೇಂದ್ರೀಕೃತ ಧ್ಯೇಯ ಮತ್ತು ಸಮರ್ಪಿತ ಶ್ರಮವು ಪ್ರತಿಯೊಬ್ಬರ ಬದುಕಿನಲ್ಲಿ ಸಾಧನೆಗೆ ದಾರಿ ತೋರಿಸುತ್ತದೆ. ಎರಡು ವರ್ಷದ ಶಿಕ್ಷಣ ಪಯಣವನ್ನು ಪೂರೈಸಿದ ವಿದ್ಯಾರ್ಥಿಗಳ ಭವಿಷ್ಯ ಯಶಸ್ವಿಯಾಗಲಿ” ಎಂದು ಆಶೀರ್ವಚನ ನೀಡಿದರು.

ಸಂಸ್ಥೆಯ ಪ್ರಿನ್ಸಿಪಾಲ್ ಮಾತನಾಡಿ 2023–25ನೇ ಸಾಲಿನ ಎಲ್ಲ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಕಂಪನಿಗಳಾದ ಬೆಂಗಳೂರು ಟೊಯೋಟಾ ಕಿರ್ಲೊಸ್ಕರ್ ಮೋಟಾರ್ ಲಿಮಿಟೆಡ್, ಟೊಯೋಟಾ ಕಿರ್ಲೊಸ್ಕರ್ ಆಟೋ ಪ್ರೈ.ಲಿ., ಇಂಡೋ ಎಂಐಎಂ ಪ್ರೈ.ಲಿ., ಡೈನೋಟೆಡ್ ಉತ್ಪನ್ನಗಳು ಪ್ರೈ.ಲಿ., ಬೋಸ್ ಆಟೋಮೋಟಿವ್ ಲಿ., ಟ್ರೈಡೆಂಟ್ ಮೋಟಾರ್ಸ್ ಪ್ರೈ. ಲಿ., ಬೆಂಗಳೂರು ಹುಂಡೈ ಮೋಟಾರ್ಸ್, ಮೂಡಬಿದ್ರೆ ಭಾರತ್ ಬೆನ್ಸ್ ಟ್ರಕ್ಸ್ ಸ್ಕೂಫ್, ಮೈಸೂರು ಶಾಹಿ ಎಕ್ಸ್‌ಪೋರ್ಟ್ಸ್ ಗಳಲ್ಲಿ ಒಟ್ಟು 160 ವಿದ್ಯಾರ್ಥಿಗಳು ಎಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್, ಫಿಟ್ಟರ್, ಮೋಟಾರ್ ಮೆಕ್ಯಾನಿಕಲ್, ವೆಲ್ಡರ್ ಹಾಗೂ ಕೋಪ ವಿಭಾಗಗಳಿಂದ ಆಯ್ಕೆಯಾಗಿ ಉದ್ಯೋಗಾವಕಾಶ ಪಡೆದಿದ್ದಾರೆ. ಇದು ಸಂಸ್ಥೆಗೆ ಹೆಮ್ಮೆಗುರಿಯ ಸಾಧನೆ ಎಂದರು

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಫಾ.ಸಾಮ್ಯುವೆಲ್ ಚಾರ್ಜ್, ಫಾ.ಜೈಸನ್ ಸೈಮನ್, ತರಬೇತಿ ಅಧಿಕಾರಿ ಜಾನ್ ಪಿ ಎಸ್, ವಿದ್ಯಾರ್ಥಿಗಳ ಪೋಷಕರು, ಶಿಕ್ಷಕ ವೃಂದ ಹಾಗೂ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

  •  

Leave a Reply

You May Have Missed

error: Content is protected !!