ಬಲ್ಯ ನೇರೊಳ್ತಡ್ಕದ ನಿವೃತ್ತ ಆರೋಗ್ಯ ನೌಕರ ಬಾಬು ಗೌಡ ಎನ್ ನಿಧನ

Nellyady

ಬಲ್ಯ ನೇರೊಳ್ತಡ್ಕದ ನಿವೃತ್ತ ಆರೋಗ್ಯ ನೌಕರ ಬಾಬು ಗೌಡ ಎನ್ ನಿಧನ

ನೆಲ್ಯಾಡಿ: ಬಲ್ಯ ಗ್ರಾಮದ ನೇರೊಳ್ತಡ್ಕ ನಿವಾಸಿ ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರದ ನಿವೃತ್ತ ನೌಕರರಾದ ಬಾಬು ಗೌಡ ಎನ್ (85) ಅವರು ಅಲ್ಪಕಾಲದ ಅನಾರೋಗ್ಯದಿಂದ ಸೆ.24ರಂದು ನಿಧನರಾದರು.

ಬಾಬುಗೌಡ ಅವರು ಸುಮಾರು 25 ವರ್ಷಗಳ ಕಾಲ ಲೋಕೋಪಯೋಗಿ ಇಲಾಖೆಯಲ್ಲಿ ಗ್ಯಾಂಗ್ ಮ್ಯಾನ್ ಆಗಿ ವೃತ್ತಿ ಜೀವನ ನಡೆಸಿದ ಬಳಿಕ, 1990ರಲ್ಲಿ ಪದೋನ್ನತಿ ಹೊಂದಿ ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಿ ದರ್ಜೆಯ ನೌಕರರಾಗಿ ಸೇವೆ ಸಲ್ಲಿಸಿದರು. ಅಲ್ಲಿ ಸುಮಾರು 10 ವರ್ಷಗಳ ಕಾಲ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು.

ಮೃತರಿಗೆ ನೆಲ್ಯಾಡಿಯ ಮೊಬೈಲ್ ಮ್ಯಾಟ್ರಿಕ್ಸ್ ನ ಸಂಸ್ಥೆಯ ಉದ್ಯಮಿ ವಿಶ್ವನಾಥ ಸೇರಿ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರಿದ್ದಾರೆ.

  •  
Previous post

ಸೆ.25ರಿಂದ ಅ.1ರವರೆಗೆ ನೆಲ್ಯಾಡಿ ಜಾರ್ಜ್ ವಿದ್ಯಾಸಂಸ್ಥೆಯ ಎನ್‌.ಎಸ್‌.ಎಸ್‌. ವಾರ್ಷಿಕ ವಿಶೇಷ ಶಿಬಿರ

Next post

ಕೌಕ್ರಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ ವಾರ್ಷಿಕ ಸಭೆ| ರೂ. 1.13 ಲಕ್ಷ ನಿವ್ವಳ ಲಾಭ| ಶೇ.9.5% ಡಿವಿಡೆಂಡ್|ಪ್ರತಿ ಲೀಟರ್ ಹಾಲಿಗೆ 0.30 ಪೈಸೆ ಬೋನಸ್

Leave a Reply

You May Have Missed

error: Content is protected !!