ಸುಬ್ರಹ್ಮಣ್ಯ: ನೋಟು ಮತ್ತು ನಾಣ್ಯಗಳ ಬೃಹತ್ ಪ್ರದರ್ಶನ

ಸುಬ್ರಹ್ಮಣ್ಯ: ನೋಟು ಮತ್ತು ನಾಣ್ಯಗಳ ಬೃಹತ್ ಪ್ರದರ್ಶನ

ನೇಸರ ಮಾ.14: ಕುಕ್ಕೇಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ದಿನಾಂಕ 12-3-2022 ರಂದು ಆಂತರಿಕ ಗುಣಮಟ್ಟ ಕೋಶ, ಇತಿಹಾಸ ವಿಭಾಗ, ರಕ್ಷಕ ಶಿಕ್ಷಕ ಸಂಘ, ಪ್ರಾಕ್ತನ ವಿದ್ಯಾರ್ಥಿ ಪರಿಷತ್ ಸಹಯೋಗದಲ್ಲಿ ನೋಟು ಮತ್ತು ನಾಣ್ಯಗಳ ಬೃಹತ್ ಪ್ರದರ್ಶನ ನೆರವೇರಿತು.

ಹರ್ಷಿತ್ ಎಚ್. ಅಧ್ಯಕ್ಷರು, ಪ್ರಾಕ್ತನ ವಿದ್ಯಾರ್ಥಿ ಪರಿಷತ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಜಯ್ ನಾರಾಯಣರಾವ್ ನಾಣ್ಯ ಸಂಗ್ರಹಕಾರರು ಪ್ರಾಸ್ತಾವಿಕ ಮಾತುಗಳನ್ನು ನುಡಿದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಗೋವಿಂದ ಎನ್.ಎಸ್ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸಾದ ಎನ್. ಸ್ವಾಗತಿಸಿದರು, ಉಪನ್ಯಾಸಕಿ ನಮಿತಾ ಎಂ.ಎ ಧನ್ಯವಾದ ಸಮರ್ಪಿಸಿದರು. ಸಂತೋಷ್ ದ್ವಿತೀಯ ಕಲಾ ವಿಭಾಗ, ರಕ್ಷಿತ ತೃತೀಯ ಕಲಾ ವಿಭಾಗ ಕಾರ್ಯಕ್ರಮ ನಿರೂಪಿಸಿದರು. ಪ್ರಾಕ್ತನ ವಿದ್ಯಾರ್ಥಿ ಪರಿಷತ್ತಿನ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

—ಜಾಹೀರಾತು—

Leave a Reply

You May Have Missed

error: Content is protected !!