ಹೊಸಮಠ ಸಿಎ ಬ್ಯಾಂಕಿನ ಅಧ್ಯಕ್ಷರಾಗಿ ನೋಟರಿ ಶಿವಪ್ರಸಾದ್ ಪುತ್ತಿಲ ಅವಿರೋಧ ಆಯ್ಕೆ

ಹೊಸಮಠ ಸಿಎ ಬ್ಯಾಂಕಿನ ಅಧ್ಯಕ್ಷರಾಗಿ ನೋಟರಿ ಶಿವಪ್ರಸಾದ್ ಪುತ್ತಿಲ ಅವಿರೋಧ ಆಯ್ಕೆ

ನೇಸರ ಮಾ.14: ಕಡಬ ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ನೋಟರಿ ಶಿವಪ್ರಸಾದ್ ಪುತ್ತಿಲ, ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಮಾ.14ರಂದು ಸಂಘದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ನಾಗೇಂದ್ರ ಹಿರಿಯ ಅಧೀಕ್ಷಕರು ಸಹಕಾರಿ ಇಲಾಖೆ ಮಂಗಳೂರು ನಡೆಸಿಕೊಟ್ಟರು.

ಉಪಾಧ್ಯಕ್ಷರಾದ ಕೃಷ್ಣಪ್ಪ ದೇವಾಡಿಗ, ಮಾಜಿ ಅಧ್ಯಕ್ಷರಾದ ಶಶಾಂಕ ಗೋಖಲೆ, ನಿರ್ದೇಶಕರಾದ ಜಯಚಂದ್ರ, ಮೇಲ್ವಿಚಾರಕರಾದ ಪ್ರದೀಪ್.ಕೆ ಹಾಗೂ ಮುಖ್ಯ ಕಾರ್ಯನಿರ್ವಾಹಕರಾದ ಸೋಮಸುಂದರ ಶೆಟ್ಟಿಯವರು ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಶುಭ ಹಾರೈಸಿದರು. ಸಂಘದ ನಿರ್ದೇಶಕರಾದ ಕುಶ ಕುಮಾರ್, ಜಗನ್ನಾಥ್.ಜಿ, ಸೀತಾರಾಮ ಡಿ.ಪಿ. ಕುಕ್ಕ.ಏನ್, ನೀಲಯ್ಯ ಬನಾರಿ, ಶ್ರೀಮತಿ ಸೀತಮ್ಮ, ಶ್ರೀಮತಿ ಸವಿತಾ ಸಿ.ಜಿ, ಪದ್ಮಯ್ಯ ಪೂಜಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

—ಜಾಹೀರಾತು—

Leave a Reply

You May Have Missed

error: Content is protected !!