ಮಣ್ಣಗುಂಡಿ: ಲಾರಿ ಪಲ್ಟಿ-ಚಾಲಕ ಪಾರು

ನೆಲ್ಯಾಡಿ

ಮಣ್ಣಗುಂಡಿ: ಲಾರಿ ಪಲ್ಟಿ-ಚಾಲಕ ಪಾರು

ನೆಲ್ಯಾಡಿ: ಹಾಸನ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ಅ.27ರಂದು ರಾತ್ರಿ ನಡೆದಿದೆ.

ಘಟನೆಯಲ್ಲಿ ಚಾಲಕ ಉಮೇಶ್ ಎಂಬವರು ತರಚಿದ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಹಾಸನ ಕಡೆಯಿಂದ ಮಂಗಳೂರಿಗೆ ಮರದಹುಡಿ ಸಾಗಾಟದ ಮಾಡುತ್ತಿದ್ದ ಲಾರಿ ಮಣ್ಣಗುಂಡಿ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಲಾರಿಯಲ್ಲಿ ಚಾಲಕ ಮಾತ್ರ ಇದ್ದು ಅವರು ತರಚಿದ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

  •  
Previous post

ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆ ಕ್ರೀಡಾ ಚಟುವಟಿಕೆಗಳ ಸಹಾಯ ನಿಧಿ — ಅದೃಷ್ಟ ಚೀಟಿ ಡ್ರಾ ಫಲಿತಾಂಶ ಪ್ರಕಟಣೆ

Next post

RRB Recruitment 2025: ರೈಲ್ವೇ ಇಲಾಖೆಯಲ್ಲಿ 5810 ಹುದ್ದೆಗಳಿಗೆ ನೇಮಕಾತಿ; ಆಯ್ಕೆ ಪ್ರಕ್ರಿಯೆಯನ್ನು ಇಲ್ಲಿ ತಿಳಿಯಿರಿ

Leave a Reply

You May Have Missed

error: Content is protected !!