ನೆಲ್ಯಾಡಿ: ನಾಳೆ(ನ.16) ಹೊಸಮಜಲು–ಕೌಕ್ರಾಡಿ ಬಾಣಜಾಲು ಗದ್ದೆಯಲ್ಲಿ “ಕಂಡಡ್ ಒಂಜಿದಿನ” ಕ್ರೀಡಾಕೂಟ

ನೆಲ್ಯಾಡಿ: ನಾಳೆ(ನ.16) ಹೊಸಮಜಲು–ಕೌಕ್ರಾಡಿ ಬಾಣಜಾಲು ಗದ್ದೆಯಲ್ಲಿ “ಕಂಡಡ್ ಒಂಜಿದಿನ” ಕ್ರೀಡಾಕೂಟ

ನೆಲ್ಯಾಡಿ: ನಾಳೆ(ನ.16) ಹೊಸಮಜಲು–ಕೌಕ್ರಾಡಿ ಬಾಣಜಾಲು ಗದ್ದೆಯಲ್ಲಿ “ಕಂಡಡ್ ಒಂಜಿದಿನ” ಕ್ರೀಡಾಕೂಟ

ನೆಲ್ಯಾಡಿ: ಅಶ್ವತ್ಥ ಗೆಳೆಯರ ಬಳಗ ಹೊಸಮಜಲು–ಕೌಕ್ರಾಡಿ ಇವರ ಆಶ್ರಯದಲ್ಲಿ ಸ್ಥಳೀಯ ಹಿಂದೂ ಬಾಂಧವರಿಗಾಗಿ ಆಯೋಜಿಸಿರುವ ದ್ವಿತೀಯ ವರ್ಷದ “ಕಂಡಡ್ ಒಂಜಿದಿನ” ಭವ್ಯ ಕ್ರೀಡಾಕೂಟ ನ.16ರಂದು ಆದಿತ್ಯವಾರ ಭವ್ಯವಾಗಿ ನಡೆಯಲಿದೆ.

ಬೆಳಿಗ್ಗೆ 7.30ಕ್ಕೆ ಅಶ್ವತ್ಥ ಕಟ್ಟೆಯಿಂದ ಜೋಡೆತ್ತಿನ ಹಾಗೂ ಟಾಸೆ ವಾಧ್ಯಗಳ ನಾದದೊಂದಿಗೆ ಮೆರವಣಿಗೆ ಬಾಣಜಾಲು ಗದ್ದೆಯವರೆಗೆ ಸಾಗಲಿದ್ದು, ಸ್ಥಳೀಯರು ಹಾಗೂ ಬಾಂಧವರು ಉತ್ಸಾಹಭರಿತವಾಗಿ ಭಾಗವಹಿಸಲಿದ್ದಾರೆ.

ಬಾಣಜಾಲು ಗದ್ದೆಯಲ್ಲಿ ಉದ್ಘಾಟನಾ ಸಮಾರಂಭ ಬೆಳಿಗ್ಗೆ 9ಕ್ಕೆ ನಡೆಯಲಿದ್ದು, ಸಭಾ ಕಾರ್ಯಕ್ರಮವನ್ನು ಮಾಜಿ ರಾಜ್ಯಾಧ್ಯಕ್ಷರು, ಮಾಜಿ ಸಂಸದರು, ಬಿಜೆಪಿ ರಾಜ್ಯ ಕೋರ್ ಕಮಿಟಿ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ಕ್ರೀಡಾಕೂಟದ ಉದ್ಘಾಟಕರಾಗಿ ಬೆಳ್ತಂಗಡಿ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಮೆರವಣಿಗೆ ಉದ್ಘಾಟಕರಾಗಿ ಸುಬ್ರಹ್ಮಣ್ಯ ವಿಲಾಸ ಮಾಲಕರಾದ ಸುಬ್ರಹ್ಮಣ್ಯ ಆಚಾರ್ಯ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಸುರೇಶ್ ಕುಂಡಡ್ಕ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕ್ಷೇ.ಧ.ಗ್ರಾ ಯೋಜನೆ ವಲಯ ಮೇಲ್ವಿಚಾರಕ ಆನಂದ, ಗೌರವಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ಮುಳಿಯ ಗೋಲ್ಡ್ & ಡೈಮಂಡ್ಸ್ ಮ್ಯಾನೇಜರ್ ರಾಘವೇಂದ್ರ ಪಾಟೀಲ್, ಮಾಜಿ ಜಿ.ಪಂ ಸದಸ್ಯ ಸರ್ವೋತ್ತಮ ಗೌಡ, ನೆಲ್ಯಾಡಿ ಕಾಮಧೇನು ಮಹಿಳಾ ಸಂಘದ ಅಧ್ಯಕ್ಷೆ ಉಷಾ ಅಂಚನ್, ಕೌಕ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲೋಕೇಶ್ ಬಾಣಜಾಲು, ಉದ್ಯಮಿ ಶಿವಣ್ಣ ಪಿ. ಹೆಗ್ಡೆ, ಮುಖ್ಯಶಿಕ್ಷಕಿ ಜಯಂತಿ ಬಿ.ಎಂ. ಭಾಗವಹಿಸಲಿದ್ದಾರೆ.

ಗೌರವಾರ್ಪಣೆ:
ಮೆಸ್ಕಾಂ ಪವರ್‌ಮೆನ್ ವಿಠಲ, ಹಿರಿಯ ಕೃಷಿಕ ಮಾಧವ ಗೌಡ ಗುತ್ತಿನಮನೆ, ಹಿರಿಯ ಕೃಷಿಕ ಪೊಡಿಯ ಅಜ್ಜ, ಕೊರಗೆದಿ ಕಂಚರಮಕ್ಕಿ ಪಾಡ್ದನ ಗಾಯಕರು ಗೌರವಿಸಲ್ಪಡಲಿದ್ದಾರೆ.

ಅಂಗನವಾಡಿ ಮಕ್ಕಳಿಂದ 50 ವರ್ಷ ಮೇಲ್ಪಟ್ಟ ಹಿರಿಯರ ತನಕ ಎಲ್ಲರಿಗಾಗಿ ವೈವಿಧ್ಯಮಯ, ಮನರಂಜನಾ ಆಟೋಟ ಸ್ಪರ್ಧೆಗಳು ಸಿದ್ಧವಾಗಿವೆ. ಬೆಳಿಗ್ಗೆ 10ಕ್ಕೆ ಧರ್ಮಶ್ರೀ ಭಜನಾ ಮಂಡಳಿ ಭಜನಾ ಕಾರ್ಯಕ್ರಮ ನಡೆಸಲಿದೆ.

ಸಂಜೆ 5ಕ್ಕೆ ಸಮಾರೋಪ:
ಸಮಾರೋಪ ಸಭೆಯ ಅಧ್ಯಕ್ಷತೆಯನ್ನು ಅಶ್ವತ್ಥ ಗೆಳೆಯರ ಬಳಗ ಅಧ್ಯಕ್ಷ ರೋಶನ್ ಬಿ.ಜೆ. ವಹಿಸಲಿದ್ದಾರೆ. ರಾಜ್ಯ ಬಿಜೆಪಿ ಶಿಕ್ಷಣ ಪ್ರಕೋಷ್ಟದ ಮುರಳಿ ಹೊಸಮಜಲು, ಕೌಕ್ರಾಡಿ ಸದಸ್ಯರಾದ ಸುಧಾಕರ ಗುತ್ತಿನಮನೆ, ಸವಿತಾ, ಪುಷ್ಪಾ, ದತ್ತ ಕೃಪಾ ಸ್ಟೋರ್ ಮಾಲಕ ಪದ್ಮನಾಭ ಶೆಟ್ಟಿ, ಸಿವಿಲ್ ಇಂಜಿನಿಯರ್ ಚಂದ್ರಹಾಸ ಪನ್ಯಾಡಿ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಕಾರ್ಯನಿರ್ವಣಾಧಿಕಾರಿ ದಯಾಕರ ರೈ, ನೆಲ್ಯಾಡಿ ಆಶ್ವಿನಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಮುರಳೀಧರ ಪ್ರಮುಖ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕ್ರೀಡಾಕೂಟದ ಸರ್ವಾಂಗೀಣ ಯಶಸ್ಸಿಗಾಗಿ ಸಹಕರಿಸುವಂತೆ ಅಶ್ವತ ಗೆಳೆಯರ ಬಳಗ ಹೊಸಮಜಲು – ಕೌಕ್ರಾಡಿ ಗೌರವಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ಅಧ್ಯಕ್ಷ ರೋಶನ್ ಬಿ.ಜೆ., ಉಪಾಧ್ಯಕ್ಷ ಸಂತೋಷ್ ಕಲಾಯಿ, ಕಾರ್ಯದರ್ಶಿ ಶೈಲೇಶ್ ಹೆಗ್ಡೆ, ಕೋಶಾಧಿಕಾರಿ ಪ್ರಜ್ವಲ್ ಬಿ., ಸಂಚಾಲಕ ಸೋನಿತ್, ಸಹ ಸಂಚಾಲಕ ನವೀನ್ ಬಟ್ಟೆಸಾಗು, ರಂಜಿತ್ ಮಂಚಿ ಹಾಗೂ ಎಲ್ಲಾ ಸದಸ್ಯರು ತಿಳಿಸಿದ್ದಾರೆ.

  •  

Leave a Reply

You May Have Missed

error: Content is protected !!