ನೆಲ್ಯಾಡಿ ಪೇಟೆಯಲ್ಲಿ ಸರಣಿ ಕಳ್ಳತನ ನಡೆಸಿದ ಆರೋಪಿಯನ್ನು ಸೆರೆ ಹಿಡಿದ ಉಪ್ಪಿನಂಗಡಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕುಮಾರ್ ಕಾಂಬ್ಳೆ ನೇತೃತ್ವದ ತಂಡ

ನೆಲ್ಯಾಡಿ ಪೇಟೆಯಲ್ಲಿ ಸರಣಿ ಕಳ್ಳತನ ನಡೆಸಿದ ಆರೋಪಿಯನ್ನು ಸೆರೆ ಹಿಡಿದ ಉಪ್ಪಿನಂಗಡಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕುಮಾರ್ ಕಾಂಬ್ಳೆ ನೇತೃತ್ವದ ತಂಡ

ನೇಸರ ಮಾ.15: ನೆಲ್ಯಾಡಿ ಪೇಟೆಯಲ್ಲಿ ನ.9ರಂದು ರಾತ್ರಿ ಮಂಜುನಾಥ ತರಕಾರಿ ಅಂಗಡಿ, ಸಾಯಿ ಮೆಡಿಕಲ್, ಸಾಯಿ ಬೇಕರಿ, ಆದರ್ಶ ಫ್ಯಾನ್ಸಿ, ಸೀಗಲ್ ಅಡಿಕೆ ಅಂಗಡಿ, ಸುರಕ್ಷಾ ಫ್ಯಾನ್ಸಿ, ಟಿಂಕು ಸ್ಟೋರ್, ಅರುಣ್ ಸ್ವೀಟ್ಸ್ ನಿಂದ ಸರಣಿ ಕಳ್ಳತನ ನಡೆದಿತ್ತು. ಇದೀಗ ಸರಣಿ ಕಳ್ಳತನ ನಡೆಸಿದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಸೆರೆ ಹಿಡಿಯುವುದರಲ್ಲಿ ಯಶಸ್ವಿಯಾಗಿದ್ದಾರೆ.

ಈರಣ್ಣ ಹಾವೇರಿ ಬಂಧಿತ ಆರೋಪಿ. ಈತ‌ ಇತರ ಕಳ್ಳತನ ಪ್ರಕರಣದ ಆರೋಪಿಯೂ‌ ಆಗಿದ್ದು, ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ. ಉಪ್ಪಿನಂಗಡಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕುಮಾರ್ ಕಾಂಬ್ಳೆ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಪತ್ತೆಹಚ್ಚಲಾಗಿತ್ತು.
ದಸ್ತಗಿರಿಯಲ್ಲಿ ಪ್ರೊಬೆಷನರಿ ಪಿಎಸ್ಐ ಅಕ್ಷಯ್, ಹೆಡ್ ಕಾನ್ಸ್ಟೇಬಲ್ ಹರೀಶ್, ಡ್ರೈವರ್ ಕನಕರಾಜ್, ನೆಲ್ಯಾಡಿ ಹೊರಠಾಣೆ ಪೊಲೀಸ್ ಸಿಬ್ಬಂದಿಗಳಾದ ಬಾಲಕೃಷ್ಣ, ಯೋಗರಾಜ್, ಪ್ರತಾಪ್ ಸಹಕರಿಸಿದರು. ಪ್ರಕರಣ ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾಗಿದೆ.

Leave a Reply

You May Have Missed

error: Content is protected !!